ಸುಳ್ಯ: ನಾಗಮಂಗಲ ದಲ್ಲಿ ಗಣಪತಿ ಮೆರವಣಿಗೆ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಖಂಡನೀಯವೆಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದ ಪ್ರತಿ ಹಳ್ಳಿ-ಗಲ್ಲಿಗಳಲ್ಲಿ ನೂರಾರು ವರ್ಷಗಳಿಂದ ಹಿಂದೂ ಸಮಾಜ ಗಣೇಶೋತ್ಸವ ವನ್ನು ಆಚರಣೆ ಮಾಡುತ್ತ ಬಂದಿದೆ, ಸ್ವಾತಂತ್ರ್ಯ ದಂತ ಹೋರಾಟಕ್ಕೆ ಈ ಉತ್ಸವ ಪ್ರೇರಣೆಯಾಗಿತ್ತು ಆದರೆ ನಾಗಮಂಗಲ ದಲ್ಲಿ ಮತಾಂಧ ಶಕ್ತಿಗಳು ಗಣೇಶನ ಮೆರವಣಿಗೆ ಕಲ್ಲು ತೂರಾಟ ನಡೆಸಿ, ಅಂಗಡಿಗಳಿಗೆ ಮೇಲೆ ದಾಳಿ ನಡೆಸುವ ಮೂಲಕ ಹಿಂದೂ ಸಮಾಜದ ಭಾವನೆಗಳನ್ನು ಹತ್ತಿಕ್ಕುವ ಕೆಲಸ ಮಾಡಿರುವುದು ಖಂಡನೀಯವಾಗಿದೆ. ಕಾಂಗ್ರೆಸ್ ಸರ್ಕಾರ ತುಷ್ಟಿಕರಣ ನೀತಿಗಳೇ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡಿದ್ದು,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವೆಂಕಟ್ ವಳಲಂಬೆ ಮಾದ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ