ಅರಂತೋಡು : 6ನೇ ಶತಮಾನದಲ್ಲಿ ಅರೇಬಿಯಾದಲ್ಲಿನ ಅನಾಚಾರ, ಮೂಡನಂಬಿಕೆ, ಅಕ್ರಮ ದಬ್ಬಾಳಿಕೆಗಳನ್ನು ನಿರ್ಮೂಲನೆ ಮಾಡಿ ಒಂದು ಸಮೂಹವನ್ನು ಅದರಿಂದ ವಿಮುಕ್ತಿಗೊಳಿಸಿ ಅವರನ್ನು ಸುಸಂಸ್ಕೃತಗಳನ್ನಾಗಿ ಮಾಡುವಲ್ಲಿ
ಸಮಗ್ರ ಕ್ರಾಂತಿಯ ಹರಿಕಾರರಾಗಿದ್ದರು ಮಹಮ್ಮದ್ ಪೈಗಂಬರರು ಎಂದು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಹೇಳಿದರು ಅವರು ಸೆ.16 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್, ನುಸ್ರತುಲ್ ಇಸ್ಲಾಮ್ ಮದರಸ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಪ್ರವಾದಿ ಮಹಮ್ಮದ್ (ಸ:ಅ) ರವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್, ಮದರಸ ವಿದ್ಯಾರ್ಥಿಗಳ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗಂಡಿ ವಹಿಸಿದ್ದರು. ಮದರಸ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಭಾಷಣ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಿತು. ಬೆಳಿಗ್ಗೆ ಧ್ವಜಾರೋಹಣದ ಬಳಿಕ ಮೌಲೂದ್ ಪಾರಾಯಣ, ಮಿಲಾದ್ ಜಾಥಾ, ಆಕರ್ಷಕ ದಫ್, ಫ್ಲವರ್ ಶೋಗಳು ನಡೆಯಿತು. ನಂತರ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಸದರ್ ನೌಶದ್ ಅಝ್‌ಹರಿ ದುವಾಃ ನೆರವೇರಿಸಿದರು. ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಸಮಾರೋಪ ಭಾಷಣ ಮಾಡಿದರು. ಅನ್ವಾರುಲ್ ಹುದಾ ಎಸೋಸಿಯೇಷನ್ ಅಧ್ಯಕ್ಷ ಎಸ್ ಎಂ ಮಜೀದ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ಎಸೋಸಿಯೇಷನ್ ಗೌರವಾಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್, ಜಮಾತ್ ಉಪಾಧ್ಯಕ್ಷ ಹಾಜಿ ಕೆ ಮಹಮ್ಮದ್, ಕಾರ್ಯದರ್ಶಿ ಕೆ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಎ ಹನೀಫ್, ಸಂಶುದ್ಧೀನ್ ಪೆಲ್ತಡ್ಕ, ಕೆ ಎಂ ಮೋಯಿದು ಕುಕ್ಕುಂಬಳ, ಮುಜೀಬ್ ಅರಂತೋಡು, ಮನ್ಸೂದ್ ಪಾರೆಕ್ಕಲ್, ಎಸೋಸಿಯೇಷನ್ ಕಾರ್ಯದರ್ಶಿ ಪಸೀಲ್, ಕೋಶಾದಿಕಾರಿ ಅಝರುದ್ದೀನ್, ದಿಕ್ರ್ ಸ್ವಲತ್ ಅಧ್ಯಕ್ಷ ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ರಹೀಮ್, ಹಬೀಬ್ ಗುಂಡಿ, ಕೆ ಎಂ ಅನ್ವಾರ್, ಮೊಹಮ್ಮದ್ ಕಮಾಲ್ ಪಾರೆಕ್ಕಲ್, ಇಸ್ಮಾಯಿಲ್ ಕುಕ್ಕುಂಬಳ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ತಾಜುದ್ಧೀನ್ ಅರಂತೋಡು, ಅಬ್ದುಲ್ ಖಾದರ್ ಮೊಟ್ಟೆೆಂಗಾರ್, ಜವಾದ್ ಪಾರೆಕಲ್, ಮೊಹಿಸೀನ್, ಮುಝಮ್ಮಿಲ್ ಕುಕ್ಕುಂಬಳ, ಮುನೀರ್ ಸೆಂಟ್ಯಾರ್, ಕಬೀರ್ ಸೆಂಟ್ಯಾರ್, ಸರ್ಪುಧ್ದೀನ್, ಸೂಫಿ, ಬಾತೀಷಾ, ಆರಿಫ್, ಅರ್ಷಾದ್ ಗುಂಡಿ, ಅಶ್ರೀದ್ ಗುಂಡಿ, ಹಾಶೀಮ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು