ಸುಳ್ಯ : ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜನೆಗೊಂಡ ಪ್ರಧಾನಿ ನರೇಂದ್ರ ಮೋದಿಯವರ 74ನೇ ವರ್ಷದ ಜನ್ಮ ದಿನಾಚರಣೆ ಅಡ್ಕಾರಿನ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ದೇಶವನ್ನು ಮುನ್ನಡೆಸುತ್ತಿರುವ ಅತ್ಯಂತ ಪ್ರಭಾವಶಾಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ವನವಾಸಿ ಕಲ್ಯಾಣ ಆಶ್ರಮದ ಮಕ್ಕಳ ಜತೆ ನಡೆಸುತ್ತಿರುವ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯ ಶ್ಲಾಘನಿಯ , ಇವರುಗಳ ಕಾರ್ಯ ಎಲ್ಲರಿಗೂ ಮಾದರಿಯಾಗಲಿ, ಪ್ರಧಾನಿ ಮೋದಿಯವರು ದೀರ್ಘಾಯುಷ್ಯ ಹೊಂದಲಿ ಎಂದು ಹೇಳಿ
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ ಕಂದಡ್ಕ ಪ್ರಧಾನಿಯವರ ಕಾರ್ಯವೈಖರಿ ಹಾಗೂ ಆಚರಣೆಯ ಹಿನ್ನಲೆ ತಿಳಿಸಿದರು.
ಮಂಡಲ ಕೋಶಾಧಿಕಾರಿ ಶುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಗುಣವತಿ ಕೊಲ್ಲಂ ತಡ್ಕ,ನಗರ ಸಭೆ ಅಧ್ಯಕ್ಷೆ ಶಶಿಕಲಾ ಎ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹೇಮಂತ್ ಮಠ ,ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯ ಕಾರಿಣಿ ಸದಸ್ಯರಾದ ಪುಷ್ಪ ಮೇದಪ್ಪ, ಯುವಮೋರ್ಚಾ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ,ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಪಾತಿಕಲ್ಲುಸುಳ್ಯ ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಚನಿಯ ಕಲ್ತಡ್ಕ,ಸುಳ್ಯ ನಗರ ಸಭೆಯ ಸದಸ್ಯರುಗಳು,ಮಹಿಳಾ ಮೋರ್ಚಾ ಪದಾಧಿಕಾರಿಗಳು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರುಗಳು, ನಿರ್ದೇಶಕಿ ಶ್ರೀದೇವಿ ನಾಗರಾಜ್ ಭಟ್, ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಆಶ್ರಮದ ವಿದ್ಯಾರ್ಥಿಗಳು ಆರತಿ ಬೆಳಗಿ ಹುಟ್ಟುಹಬ್ಬ ಆಚರಿಸಿದರು .
ಅಖಿಲಾ ನೆಕ್ರಾಜೆ ಪ್ರಾರ್ಥನೆ ಹಾಡಿ,ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಾಗತಿಸಿ, ಶ್ರೀದೇವಿ ನಾಗರಾಜ್ ಭಟ್ ವಂದಿಸಿದರು.