ಅಕ್ರಮವಾಗಿ ತೋಟದಲ್ಲಿ ಗೋ ವಧೆ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ,ಗೋಮಾಂಸ ವಶ,ಆರೋಪಿಗಳು ಪರಾರಿ

ಉಪ್ಪಿನಂಗಡಿ: ಅಕ್ರಮವಾಗಿ ಗೋ ವಧೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದ ಕಜೆ ಎಂಬಲ್ಲಿಂದ ವರದಿಯಾಗಿದೆ.
ಇಲ್ಲಿಯ ಖತೀಜಮ್ಮ ಎಂಬವರ ಅಡಿಕೆ ತೋಟಕ್ಕೆ ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿ ಅಂದಾಜು ರೂ 24,000/-ಮೌಲ್ಯದ 96 ಕೆ.ಜಿ ದನದ ಮಾಂಸ, ದೇಹದ ಅಂಗಾಂಗಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟೋನಿಕ್ ತೂಕ ಮಾಪನ ಹಾಗು ಇತರ ಸೊತ್ತುಗಳು, 2 ಅಟೋರಿಕ್ಷಾಗಳು, 1 ಮೊಟಾರ್ ಸೈಕಲ್ ಪತ್ತೆಯಾಗಿರುತ್ತದೆ.
ಆರೋಪಿಗಳನ್ನು ರಫಿಕ್, ನಝೀರ್, ಉಬೈದ್‌, ಅಶ್ರಫ್, ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ.
ಸೊತ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಸಂಖ್ಯೆ: 107/2024 ಕಲಂ: 12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 3(5) ಭಾರತೀಯ ನ್ಯಾಯ ಸಂಹಿತೆ ಯಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಪೋಲಿಸರು ಬಲೆಬೀಸಿದ್ದು, ಪತ್ತೆಗೆ ವಿಶೇಷ ತಂಡ ರಚಿಸಿ, ಶೋಧಕಾರ್ಯ ಆರಂಭಿಸಿದೆ ಎಂದು ತಿಳಿದು ಬಂದಿದೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top