ಸುಳ್ಯ : ಪ್ರೀತಿಯಿಂದ ಈ ಜಗತ್ತನ್ನೇ ಗೆಲ್ಲಬಹುದು ಸಂದೇಶ ನೀಡಿದ ಪ್ರವಾದಿಗಳನ್ನು ಮಹಾನುಭಾವರನ್ನು ಸ್ಮರಣೆ ಮಾಡಬೇಕಾದುದುಅಗತ್ಯ ಎಂದು ಅಂತರರಾಷ್ಟ್ರೀಯ ವಾಗ್ನಿ ಕೇರಳ ರಾಜ್ಯದ ಕುರುವಾರಕುಂಡ್ ಸಮನ್ವಯ ಗಿರಿ ಅಧೀನ ಮಠದ ಸ್ವಾಮಿ ಶ್ರೀಮದ್ ಆತ್ಮಾದಾಸ್ ಯಾಮಿ ಹೇಳಿದರು.
ಅವರು ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ) ಅವರ ಜನ್ಮ
ದಿನಾಚರಣೆಯ ಅಂಗವಾಗಿ ಸೆ. 20 ರಂದು ಸುಳ್ಯದಲ್ಲಿ ನಡೆದ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಬಳಿಕ ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮ ಪ್ರವಾದಿ ಸಂದೇಶ ಭಾಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮ ನೆಲೆ ನಿಲ್ಲಲು ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಪ್ರವಾದಿಯ ಸ್ಮರಣೆ ಅಗತ್ಯ ಎಂದ ಅವರು ಅನಿಷ್ಠಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ. ಪ್ರೀತಿ ಮತ್ತು ಕರುಣೆಯಿಂದ ಜಗತ್ತನೇ ಗೆಲ್ಲಬಹುದು. ಮನ ಪರಿವರ್ತನೆಯ ಮೂಲಕ ಎಲ್ಲರನ್ನೂ ಅನುಯಾಯಿಗಳನ್ನಾಗಿ ಮಾಡಿದ್ದಾರೆ. ಪ್ರೀತಿ ಮತ್ತು ಕರುಣೆಯಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಆ ರೀತಿಯ ಮಾನಸಿಕ ಪರಿವರ್ತನೆ ಎಲ್ಲರಲ್ಲಿಯೂ ಬರಬೇಕು ಎಂದು ಹೇಳಿದರು. ಜಾತಿ, ಧರ್ಮ ಎಂಬ ಕಟ್ಟುಪಾಡುಗಳು ಇಲ್ಲದೆಯೂ ಈ ಜಗತ್ತಿನಲ್ಲಿ ಬದುಕಬಹುದು ಎಂದ ಅವರು ಮನುಷ್ಯರಾಗಿ ಹುಟ್ಟಿದವರು ಎಲ್ಲರೂ ಸಹೋದರತೆಯಿಂದ ಬದುಕಬೇಕು ಎಂದು ಕರೆ ನೀಡಿದರು
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಂಞಕೋಯ ತಂಬಳ್ ಸಅದಿ ಸುಳ್ಯ ಇವರು ನೆರವೇರಿಸಿದರು. ಮುಸ್ಲಿಮ್ ಧಾರ್ಮಿಕ ಪಂಡಿತರಾದ ಎಂ.ಎಸ್.ಎಂ. ಅಬ್ದುಲ್ ರಶೀದ್ ಝನಿ ಖಾಮಿಲ್ ಸಖಾಫಿ, ಮೌಲಾನಾ ಅಝೀಝ್ ಧಾರಿಮಿ ಚೊಕ್ಕಬೆಟ್ಟು ಹಾಗೂ ಸುಹೈಲ್ ಧಾರಿಮಿ ನಾಪೋಕ್ಲು ಮಾತನಾಡಿದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪ್ರಮುಖರಾದ ಹುಸೈನ್ ತಂಜಳ್ ಆದೂರು, ಇಸಾಕ್ ಸಾಹೇಬ್ ಪಾಜಪಳ್ಳ ಮಹಮ್ಮದ್ ಇಕ್ಷಾಲ್ ಎಲಿಮಲೆ, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್ ರಹಿಮಾನ್ ಸಂಕೇಶ್, ಫವಾಝ್ ಕನಕಮಜಲು, ಎ.ಬಿ.ಅಶ್ರಫ್ ಸಹದಿ, ಕತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು, ಆದಂ ಹಾಜಿ ಕಮ್ಮಾಡಿ, ಕೆ.ಎಂ.ಮುಸ್ತಫ, ಇಸ್ಮಾಯಿಲ್ ಪಡ್ಡಿನಂಗಡಿ, ಮಹಮ್ಮದ್ ಕುಂಞ ಗೂನಡ್ಕ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಬ್ರಾಹಿಂ ಒ.ಪಿ, ಅಬೂಬಕ್ಕರ್ ಪೂಪಿ, ಲತೀಫ್ ಹರ್ಲಡ್ವ, ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಎಸ್.ಸಂಶುದ್ದೀನ್,
ತಾಲೂಕು ಮಿಲಾದ್ ಸಮಿತಿಯ ಅಧ್ಯಕ್ಷ ಶರೀಫ್ ಕಂಠಿ, ಸಂಚಾಲಕರಾದ ಕೆ.ಎಸ್.ಉಮ್ಮರ್, ಅಬ್ದುಲ್ ಕಲಾಂ, ಸಮಿತಿಯ ಉಪಾಧ್ಯಕ್ಷರಾದ ಸಿದ್ದೀಕ್ ಕೊಕ್ಕೋ, ಎನ್. ಎ.ಜುನೈದ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಝೀಝ್ ಸಂಗಮ್, ಜೊತೆ ಕಾರ್ಯದರ್ಶಿಗಳಾದ ಕಲಂದರ್ ಎಲಿಮಲೆ, ಮುನಾಫರ್, ಉನೈಸ್ ಪೆರಾಜೆ ಹಾಗೂ ನವಾಜ್ ಪಂಡಿತ್, ಇಕ್ಸಾಲ್ ಸುಣ್ಣಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಿಲಾದ್ ಸಮಿತಿಯ ಅಧ್ಯಕ್ಷ ಶರೀಫ್ ಕಂಠಿ ಸ್ವಾಗತಿಸಿ, ಸಂಚಾಲಕರಾದ ಕೆ.ಎಸ್.ಉಮ್ಮರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭಕ್ಕೆ ಮುನ್ನ ಪ್ರವಾದಿ ಸಂದೇಶ ಸಾರಿ ಸುಳ್ಯದಲ್ಲಿ
ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ನಡೆಯಿತು.ಮೊಗರ್ಪಣೆ
ಮಸೀದಿ ವಠಾರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು
ಗಾಂಧಿನಗರ ಪೆಟ್ರೋಲ್ ಪಂಪ್ ಮುಂಭಾಗದ ವೇದಿಕೆಯ ತನಕ ಆಕರ್ಷಕ ಜಾಥಾ ನಡೆಯಿತು. ಜಾಥಾದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಪ್ರಖ್ಯಾತ ದಫ್ ತಂಡಗಳು ಭಾಗವಹಿಸಿ ದಫ್ ಪ್ರದರ್ಶನ ನೀಡಿದರು. ಆಕರ್ಷಕ ವಸ್ತ್ರ ಧರಿಸಿ ಪ್ರವಾದಿ ಸಂದೇಶ ಸಾರುತ್ತಾ ಭಾಗವಹಿಸಿದ ಸೈಟ್ ತಂಡಗಳು ಜಾಥಾದ ಪ್ರಮುಖ ಆಕರ್ಷಣೆಯಾಗಿತ್ತು. ಆಕರ್ಷಕ ಪ್ರದರ್ಶನಗಳೊಂದಿಗೆ ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿತು.