ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪ ಟ್ಟಿಯಂತೆ
ಅಕ್ಟೋಬರ್3 ರಿಂದ 20ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ. ಕಳೆದ ಏಪ್ರಿಲ್‌ನಲ್ಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಅ.1ರವರೆಗೆ ತರಗ ತಿಗಳು ನಡೆಯಲಿವೆ. ಅ.2ರಂದು ಗಾಂಧಿಜಯಂತಿ ಇರ ಲಿದ್ದು, ಅ. 3 ರಿಂದ 20 ರವರೆಗೆ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ. ಅ. 21 ರಿಂದ ಮತ್ತೆ ತರಗತಿಗಳು ಪುನಾರಂಭವಾಗಲಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.