ಸುಳ್ಯ : ವಿಶ್ವ ಶಾಂತಿ ದಿನಾಚರಣೆಯನ್ನು ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಕೆಪಿಸ್ ಗಾಂಧೀನಗರದಲ್ಲಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಯಾಗಿ ಲಯನ್ ರಂಗನಾಥ ಭಾಗವಹಿಸಿದ್ದರು. ವಿಶ್ವ ಶಾಂತಿ ಯ ಮಹತ್ವ ದ ಕುರಿತು ವಿದ್ಯಾರ್ಥಿ ಗಳಿಗೆ ಸೂಕ್ತ ಮಾಹಿತಿ ಯನ್ನು ನೀಡಿದರು.ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಲಯನ್ ರಾಮಚಂದ್ರ ಪಲ್ಲತಡ್ಕ, ಆನಂದ ಪೂಜಾರಿ, ರಮೇಶ್ ಶೆಟ್ಟಿ, ಪ್ರಭಾರ ಉಪ ಪ್ರಾಂಶುಪಾಲರಾದ ಜ್ಯೋತಿ ಲಕ್ಷ್ಮೀ, ಹಿರಿಯ ಶಿಕ್ಷಕರಾದ ಚಿನ್ನಪ್ಪ ಗೌಡ ಉಪಸ್ಥಿತರಿದ್ದರು. ಲಯನ್ ರಾಮಚಂದ್ರ ಪಲ್ಲತಡ್ಕ ವಂದಿಸಿದರು. ಶಿಕ್ಷಕರಾದ, ಚಿನ್ನಪ್ಪ ಗೌಡ ಪತ್ತುಕುಂಜ ಕಾರ್ಯಕ್ರಮ ನಿರ್ವಹಿಸಿದರು.