ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ, ಸುಳ್ಯ ಪ್ರಖಂಡ ಮಾತೃಶಕ್ತಿ ದುರ್ಗಾವಾಹಿನಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸುಳ್ಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ.ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ನಿರಂತರವಾಗಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ದಬ್ಬಾಳಿಕೆ ಹಾಗೂ ಮನಬಂದಂತೆ ಕೇಸುಗಳನ್ನು ದಾಖಲಿಸಿ ಕೊಂಡು ಬಂದಿರುತ್ತಾರೆ, ಸುಳ್ಯದಲ್ಲಿ ವರ್ಷಿತ್ ಚೊಕ್ಕಾಡಿ ಹಾಗೂ ಇನ್ನು ಇತರ ಹಿಂದೂ ಕಾರ್ಯಕರ್ತರನ್ನು ಸೋಮವಾರ ವಿನಾಕಾರಣ ಅವರ ಮೇಲೆ ಕೇಸು ದಾಖಲಿಸಿ ಜೈಲಿಗೆ ಹಾಕುವ ಕಾರ್ಯವನ್ನು ಮಾಡಿರುತ್ತಾರೆ ಇದರ ಮುಖಾಂತರ ಹಿಂದುಗಳ ಒಗ್ಗಟ್ಟನ್ನು ಹಾಗೂ ಹಿಂದುತ್ವಕ್ಕೆ ದುಡಿಯುವಂತ ಕಾರ್ಯಕರ್ತರ ಒಗ್ಗಟ್ಟನ್ನು ಮುರಿಯುವಂತ ಕಾರ್ಯದಲ್ಲಿ ತೊಡಗಿರುತ್ತಾರೆ ಎಂದು ಆರೋಪಿಸಲಾಗಿದೆ.ಬೆಳಿಗ್ಗೆ 9.30ಕ್ಕೆ ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಯಲಿದೆ ಎಂದು ತಿಳಿದು ಬಂದಿದೆ.