ಆಲೆಟ್ಟಿ : ತೋಟದ ಕೆರೆಗೆ ವೃದ್ಧರೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ಮಂಗಳವಾರ ಸಂಜೆ ಆಲೆಟ್ಟಿಯಿಂದ ವರದಿಯಾಗಿದೆ.
ಆಲೆಟ್ಟಿಯ ಗ್ರಾಮದ ಶಂಕರ ಪಾಟಾಳಿ ಎಂಬವರು ಮೃತಪಟ್ಟ ವ್ಯಕ್ತಿ.ಅವರಿಗೆ 75 ವರ್ಷ ಪ್ರಾಯವಾಗಿತ್ತು.ಮೃತರು ಮನೆಯಿಂದ ತೋಟದ ಕಡೆಗೆ ಹೋದವರು ಬಾರದೆ ಇದ್ದುದರಿಂದ ಪರಿಸರದಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಪಕ್ಕದ ಪರಮೇಶ್ವರ ಗೌಡ ಎಂಬವರ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಯಿತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.