ಸುಳ್ಯ: ಮರಿ ಹಾಕಿದ ತಾಯಿ ನಾಯಿಯನ್ನು ಮರಿಗಳ ಜತೆ ಬಸ್ ತಂಗುದಾಣದಲ್ಲಿ ಬಿಟ್ಟು ಹೋಗಿರುವ ಘಟನೆ ಎಡಮಂಗಲದಲ್ಲಿ ನಡೆದಿದೆ.
ಸುಮಾರು 8 ಮರಿಗಳು ಹಾಗೂ ಅದರ ತಾಯಿಯನ್ನು ಎಡಮಂಗಲದ ಸುಳುತ್ತಡ್ಕ ಸಮೀಪದ ಮಹಾಕಾಳಿ ಬಸ್ ತಂಗುದಾಣದಲ್ಲಿ ಕೆಲ ದಿನಗಳ ಹಿಂದೆ ತಂದು ಬಿಡಲಾಗಿದೆ. ಸುಮಾರು 10-15 ದಿನಗಳು ಕಳೆದಿರುವ ಮರಿಗಳು ತಾಯಿ ನಾಯಿ ಜತೆಗೆ ಬಸ್ ತಂಗುದಾಣದಲ್ಲೇ ದಿನ ಕಳೆಯುತ್ತಿವೆ. ಎಲ್ಲೋ ಮರಿ ಹಾಕಿರುವ ನಾಯಿಯನ್ನು ಮರಿಗಳ
ಜತೆಗೆ ಇಲ್ಲಿ ತಂದು ಬಿಟ್ಟು ಹೋಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.