ಪ್ರೀತಿ ಎಂಬ ಹೆಸರಿನ ಊರಿನಲ್ಲಿ
ಕೈ ಹಿಡಿದು ಸಾಗೋಣ ನಾವು ಇಲ್ಲಿ
ಕಣ್ಣಿನ ಕಣ್ಣೀರಲಿ ಅವಿತಿರೋ ನೋವಿನಲ್ಲಿ
ಹೇಳಿ ಬಿಡುವೆ ನಾ ನಿನ್ನ ಪ್ರೇಮಿಯಾಗಿ
ತೋರಿಸದಿರು ನಿನ್ನ ಕಷ್ಟವನ್ನು ಯಾರಲ್ಲೂ
ಈ ಪ್ರಪಂಚವನ್ನು ನೀ ನೋಡು
ಯಾರಿಲ್ಲದಿದ್ದರೂ ನೋಡು ನೀ ತಿರುಗಿ
ನಾನಲ್ಲಿ ನಿಂತು ನಿಂತಿರುವೆನು ನಿನಗಾಗಿ
ಅಳದಿರು ನೀನು ಸಾಂತ್ವಾನಕ್ಕೆ ಯಾರಿಲ್ಲ
ಅಳಿಸುವವರೆ ಇರುವರು ಈ ಜಗದಲ್ಲಿ
ತಲೆಬಾಗದಿರು ನೀನು ಯಾರಿಗೂ ಇಲ್ಲಿ
ಸಂಭ್ರಮಿಸು ನೀನು ನೋವು ನಲಿವಿನಲ್ಲಿ
ಸಮಯವು ಎಂದಿಗೂ ನಮ್ಮೊಂದಿಗಿರದು
ಆತ್ಮ ವಿಶ್ವಾಸವೇ ನಿನಗೆ ಎಂದಿಗೂ ದೇವರದು
ನಾ ನಿನ್ನ ಮನಸ್ಸಿಗೆ ತುಂಬುವೆನು ಅಭಿಮಾನ
ಅಳದಂತೆ ನಾ ಮಾಡುವೆ ನಿನಗೆ ಸಾಂತ್ವನ
✍️ ಪ್ರಿಯಾ ಸುಳ್ಯ ಕವಯಿತ್ರಿ
ದಕ್ಷಿಣ ಕನ್ನಡ ಜಿಲ್ಲೆ