ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಣೆ

ಮಂಗಳೂರು: ಬಜಪೆ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಿಸಲಾಗಿದೆ.
ದೀರ್ಘ‌ ಸೇವೆ ಬಳಿಕ ಶ್ವಾನದಳ ಕೆಲಸದ ಒತ್ತಡದಿಂದ ತಮ್ಮ ಸೂಕ್ಷ್ಮತೆಯನ್ನು ನಿಧಾನವಾಗಿ ಕಳೆದುಕೊಳ್ಳುವು ದರಿಂದ ಹಾಗೂ ಅವುಗಳ ಮೇಲೆ ಅಧಿಕ ಒತ್ತಡ ಹೇರದಿರುವ ಉದ್ದೇಶದಿಂದ ಅವುಗಳನ್ನು ನಿವೃತ್ತಿಗೊಳಿಸಲಾಗುತ್ತದೆ.
ಜೂಲಿ 2013ರ ಮಾರ್ಚ್‌ 26ಕ್ಕೆ ಸೇವೆಗೆ ಸೇರಿದ್ದಳು. ಆಕೆಯ ಜಾಗಕ್ಕೆ ರಿಯೋನನ್ನು ತರಲಾಗಿದೆ. ನಿವೃತ್ತಳಾದ ಜೂಲಿಗೆ ಹೂಮಾಲೆ ಹಾಕಿ, ಕೇಕ್‌ ಕತ್ತರಿಸಿ ಪ್ರೀತಿ ತೋರಿದ ಸಿಐಎಸ್‌ಎಫ್‌ ಸಿಬಂದಿ, ಹೂಗಳಿಂದ ಅಲಂಕರಿಸಲಾದ ಪುಟ್ಟ ಟ್ರಾಲಿಯಲ್ಲಿ ಕೂರಿಸಿ, ಅದನ್ನು ಎಲ್ಲರೂ ಸೇರಿ ಎಳೆಯುವ ಮೂಲಕ ಗೌರವಿಸಿದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top