ವಿದ್ಯುತ್ ಲೈನ್ ದುರಸ್ತಿ ವೇಳೆ ಕಾರ್ಮಿಕ ಬಿದ್ದು ಗಂಭೀರ

ಪಂಜ : ಸುಳ್ಯ ತಾಲೂಕಿನ ಪಂಜದ ಕರಿಕ್ಕಳ ಸಮೀಪ ವಿದ್ಯುತ್ ಲೈನ್ ಹಳೆ ತಂತಿ ಬದಲಾವಣೆ ವೇಳೆ ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಶನಿವಾರ ಮುಂಜಾನೆ ವರದಿಯಾಗಿದೆ.
ಬೆಳ್ಳಾರೆ ಸಿದ್ದಿ ಇಲೆಕ್ಟಿಕಲ್ ನ ಸಿಬ್ಬಂದಿಗಳು ಕರಿಕ್ಕಳ ಸಮೀಪ ವೈರ್‌ ಬದಲಾವಣೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಂಬ ಮುರಿದು ಬಿದ್ದು ಕಂಬದಲ್ಲಿದ್ದ ಕಿಟ್ಟು ಎಂಬವರ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top