ಕೊಕ್ಕಡ : ಕೊಕ್ಕಡದಲ್ಲಿ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ವರದಿಯಾಗಿದೆ.
ಕೊಕ್ಕಡ ಸಮೀಪದ ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ರವರ ಮಗ ನವಾಫ್ ಇಸ್ಮಾಯಿಲ್ (10 ವ.) ಮೃತಪಟ್ಟ ವಿದ್ಯಾರ್ಥಿ. ಆತೂರಿನ ಆಯಿಷಾ ಸ್ಕೂಲ್ ನ ನಾಲ್ಕನೇ ತರಗತಿಯ ವಿಧ್ಯಾರ್ಥಿ.ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದರು ಎನ್ನಲಾಗಿದೆ. ಅವರ ಮೇಲೆಯೇ ಕಾರು ಹರಿದ ಪರಿಣಾಮ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿ ಬಾಲಕ ಮೃತಪಟ್ಡಿದ್ದಾನೆ ಎಂದು ತಿಳಿದು ಬಂದಿದೆ.
ನವಾಫ್ ಅವರು ಕಾರಿನ ಹಿಂಬದಿ ನಿಂತಿದ್ದದ್ದು ಅರಿವಿಗೆ ಬಾರದೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.