ಪುಣೆ : ಹೆಲಿಕ್ಯಾಪ್ಟರ್ ಪತನವಾಗಿ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿರವ ಬವ್ಹಾನ್ ಬದ್ರುಕ್ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಸ್ಥಳೀಯರು ಹಿಂಜೇವಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಪಡೆಗಳು ಹಾಗೂ ಆಂಬುಲೆನ್ಸನ್ ಕೂಡಲೇ ಸ್ಥಳಕ್ಕೆ ಧಾವಿಸಿತಾದರೂ ಮೂವರು ಸಾವನ್ನಪ್ಪಿದ್ದರು. ಇದು ಖಾಸಗಿ ಹೆಲಿಕ್ಯಾಪ್ಟರ್ ಆಗಿದ್ದು, ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.