ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು ಘಟಕದ ವತಿಯಿಂದ ಗಾಂಧಿಜಯಂತಿ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ

ಗಾಂಧಿ ತತ್ವಕ್ಕೆ ತಧ್ವಿರುದ್ಧವಾದ ಕ್ರಿಯೆಗಳು ನಡೆಯುತ್ತಿರುವುದರಿಂದ ಅದನ್ನು ತಿದ್ದಿ ಸರಿಪಡಿಸಿಕೊಳ್ಳಲು ಇಂತಹ ಮಹಾನ್ ವ್ಯಕ್ತಿಗಳ ತತ್ವದರ್ಶಗಳನ್ನು ಯುವಜನತೆಯ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶವನ್ನು ಕಟ್ಟುವಲ್ಲಿ ಹೆಜ್ಜೆಇಡಬೇಕಾಗಿದೆ. ಆಗ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯ ಆಚರಣೆಗಳು ಅರ್ಥವನ್ನು ಪಡೆದುಕೊಳ್ಳುತ್ತದೆ. ಎಂದು ಅಂಬೇಡ್ಕರ್ ರಕ್ಷಣ ವೇದಿಕೆ ಅಧ್ಯಕ್ಷರು ನವೀನ ಕಲ್ಲುಗುಡ್ಡೆ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ಹಮ್ಮಿಕೊಂಡಿದ್ದ ಗಾಂಧಿಜಯಂತಿ ಕಾರ್ಯಕ್ರಮವನ್ನು ಧಾರ್ಮಿಕ ಮತ್ತು ಹಿರಿಯಾ ಯಕ್ಷಗಾನ ಕಲಾವಿದ ಯುವರಾಜ್ ಜೈನ್, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಮತ್ತು ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ, ಜಗನ್ನಾಥ್ ಕಾಯರ, ಊರಿನ ಹಿರಿಯರಾದ ಎಲ್ಯಣ್ಣ. ಅರಮನೆಗಯಾ ಹಾಗೂ ಊರಿನ ಹಿರಿಯ ಕಿರಿಯ ನಾಗರೀಕ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ, ಕಲ್ಲುಗುಡ್ಡೆ ವಹಿಸಿದ್ದರು.ಕಾರ್ಯಕ್ರಮವನ್ನು ಊರಿನ ಹಿರಿಯ ಯಕ್ಷಗಾನ ಕಲಾವಿದರು ಯುವರಾಜ್ ಜೈನ್, ಮರ್ಕಂಜ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿಸಲ್ಪಟ್ಟ ಗಣ್ಯರು. ಶ್ರೀಯುತ ಯುವರಾಜ್ ಜೈನ್. ಬಲ್ನಾಡು ಪೇಟೆ ಮರ್ಕಂಜ. ಧಾರ್ಮಿಕ ಮತ್ತು ಹಿರಿಯ ಯಕ್ಷಗಾನ ಕಲಾವಿದರು.
ಜಗನ್ನಾಥ್ ಕಾಯರ. ನಿವೃತ್ತ ಪೊಲೀಸ್ ಅಧಿಕಾರಿ.
ಎಲ್ಯಣ್ಣ ಅರಮನೆಗಯಾ, ಪ್ರಗತಿಪರ ಕೃಷಿಕರು. ಹಿರಿಯರು. ಇವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಪ್ರಾರ್ಥನೆಯನ್ನು ನಿಶ್ಮಿತಾ ಮತ್ತು ಚೈತ್ರ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಿಟ್ಟು ಅರಮನೆಗಯಾ ನೆರವೇರಿಸಿ ಸ್ವಾಗತವನ್ನು ತೇಜಕುಮಾರ್ ಅರಮನೆಗಯಾ ನೆರವೇರಿಸಿ ವಂದನಾರ್ಪಣೆಯನ್ನು ಚಂದ್ರಶೇಖರ ಕುಂಪುಲಿ ನೆರವೇರಿಸಿದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top