ಸಹೋದರನೇ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ನೆನ್ನೆ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ. ಹೌದು, ತಂಗಿಗೆ ಶ್ರೀರಕ್ಷೆಯಾಗಿರಬೇಕಿದ್ದ ಅಣ್ಣ ಈ ಕೃತ್ಯ ಎಸಗಿದ್ದಾನೆ. ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ ತನ್ನ ಅಣ್ಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಕೇಳಿದ್ದಾಗಿ ತಿಳಿಸಿದ್ದಾಳೆ.