ಹೆಚ್. ಡಿ ಕುಮಾರಸ್ವಾಮಿಯವರಿಗೆ ಅಸಹನೀಯ ಪದ ಬಳಸಿ ಅಗೌರವ : ಸುಳ್ಯ ತಾಲೂಕು ಜನತದಳ ಸೂಕ್ತ ಕ್ರಮಕ್ಕೆ ಒತ್ತಾಯ

ಸುಳ್ಯ: ಕೇಂದ್ರ ಸರ್ಕಾರದ ಸಚಿವರಾದ ಹೆಚ್. ಡಿ ಕುಮಾರಸ್ವಾಮಿಯವರನ್ನು ಅಸಹನೀಯ ಪದ ಬಳಕೆ ಬಳಸಿ ಅಗೌರವಿಸಿರುವುದನ್ನು ಸುಳ್ಯ ತಾಲೂಕು ಜನತದಳವು ಖಂಡಿಸುತ್ತದೆ. ಹಾಗೆಯೇ ಪೊಲೀಸ್‌ ಇಲಾಖೆಯ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ದುರುದ್ದೇಶದಿಂದ ಕೇಂದ್ರ ಸಚಿವರನ್ನು ಅವಮಾನಗೊಳಿಸಿರುವ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖ‌ರ್ ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಸುಳ್ಯ ತಾಲೂಕು ಜನತಾದಳವು ಸುಳ್ಯ ತಾಲೂಕು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿತು. ಇದರಲ್ಲಿ ಸುಳ್ಯ ತಾಲೂಕು ಜನತಾದಳದ ಅಧ್ಯಕ್ಷರಾದ ಸುಕುಮಾ‌ರ್ ಕೊಡುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಉಪಾಧ್ಯಕ್ಷರುಗಳಾದ ದೇವರಾಮ ಬಾಳಕಜೆ, ರೋಹನ್ ಪೀಟರ್, ಪ.ಜಾತಿ ಪ.ಪಂಗಡ ಅಧ್ಯಕ್ಷ ಎಂ.ಬಿ. ಚೋಮ, ರಾಮಚಂದ್ರ ಬಳ್ಳಡ್ಕ ಮೊದಲಾದವರು ಇದ್ದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top