ಧರ್ಮಸ್ಥಳ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಧರ್ಮಸ್ಥಳದ ಶಕ್ತಿನಗರದಿಂದ ವರದಿಯಾಗಿದೆ. ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡುವೆ ಅಪಘಾತ ಸಂಭವಿಸಿದೆ. ಐ20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರುಗಳು ಎರಡೂ ಜಖಂಗೊಂಡಿದೆ.