ಸುಳ್ಯ ತಾಲೂಕಿನಲ್ಲಿ ಎರಡನೇ ದಿನವೂ ಮತ್ತೋರ್ವ ಯುವಕ ಹ್ರದಯಘಾತಕ್ಕೆ ಬಲಿಯಾಗಿದ್ದಾರೆ.
ಸೋಮವಾರ ಅವಿನಾಶ್ ಬಸ್ಸು ಕಂಡೆಕ್ಟರ್ ಗುರುಪ್ರಸಾದ್ ಕುಂಚಡ್ಕ ಹ್ರದಯಘಾತಕ್ಕೆ ನಿಧನರಾಗಿದ್ದರು. ಅಮರಮುಡ್ನೂರು ಗ್ರಾಮದ ಕೆರೆಗದ್ದೆ ಜನಾರ್ದನ ಗೌಡ ರವರ ಮಗ ಪುನೀತ್ ಕೆರೆಗದ್ದೆ ಎಂಬವರು ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ಅ.15 ರಂದು ನಿಧನರಾದರು.
ಅವರಿಗೆ 42 ವರ್ಷ ಪ್ರಾಯವಾಗಿತ್ತು.
ಪುನೀತ್ ತಾಯಿ, ಪತ್ನಿ, ಮಗು ಹಾಗೂಸಹೋದರಿಯನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕುಕ್ಕುಜಡ್ಕದಲ್ಲಿ ಕೆಲ ಸಮಯದಿಂದ ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.