ಅರಂತೋಡು : ಅರಂತೋಡು ಸಮೀಪದ ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಬಿದ್ದು ಮೂವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.
ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯ ತೇಜಕುಮಾರ್ ಅವರ ಮನೆಗೆ ಬರುತ್ತಿದ್ದಾಗ ತೂಗು ಸೇತುವೆಯವ ರೋಪ್ ತುಂಡಾಗಿ ಕುಸುಮಾಧರ ಉಳುವಾರು,ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಅರಮನೆಗಯ ಅವರು ಸೇತುವೆಯಿಂದ ಕೆಳಗಡೆ ಬಿದ್ದರು. ಪರಿಣಾಮವಾಗಿ ಕುಸುಮಾಧರ ಉಳುವಾರು ಅವರ ಕೈಗೆ ಗಂಭೀರ ಏಟು ತಗುಲಿದೆ.ತೇಜಕುಮಾರ ಅವರು ರೋಪ್ ನಲ್ಲಿ ನೇತಾಡಿಕೊಂಡು ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ.ಚಂದ್ರಶೇಖರ ಅವರು ಗಾಯಗೊಂಡಿದ್ದಾರೆ.ಮೂವರು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದಾರೆ.ಮಾದ್ಯಮಗಳಲ್ಲಿ ಅರಮನೆಗಯ ತೂಗು ಸೇತುವೆ ಶಿಥಿಲಗೊಂಡಿರುವ ಬಗ್ಗೆ ಹಲವಾರು ಬಾರಿ ವರದಿ ಪ್ರಕಟಿಸಲಾಗಿದ್ದರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.