ಅಜ್ಜಾವರ : ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು.
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ ಕರ್ಲಪ್ಪಾಡಿ, ಸತ್ಯವತಿ ಬಸವನಪಾದೆ, ದಿವ್ಯಾ ಪಡ್ಡಂಬೈಲು, ಸರೋಜಿನಿ ಕರಿಯಮೂಲೆ, ರತ್ನಾವತಿ ಹನಿಯಡ್ಕ ತಮ್ಮ ಮತವನ್ನು ಚಲಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಅಜ್ಜಾವರ ಶಕ್ತಿ ಕೇಂದ್ರ ಪ್ರಮುಖರಾದ ರಾಜೇಶ್ ಮೇನಾಲ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಸಿಎ ಬ್ಯಾಂಕ್ ನಿರ್ದೇಶಕರಾದ ಪ್ರಬೋದ್ ಶೆಟ್ಟಿ, ಚಿದಾನಂದ ಇರಂತಮಜಲು ಇವರು ಗ್ರಾಮ ಪಂಚಾಯತ್ ಬಳಿಯಲ್ಲಿ ಉಪಸ್ಥಿತರಿದ್ದರು.