ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರಿ ಸುಬ್ರಮಣ್ಯ ವಲಯ ಇದರ ವತಿಯಿಂದ ಇಂದು ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ರವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಇದರ ವತಿಯಿಂದ ಹರಿಹರದಲ್ಲಿ ನಡೆದ ಪ್ರತಿಭಟನ ಸಭೆಯ ಮನವಿಯನ್ನು ವಿರೇಂದ್ರ ಹೆಗ್ಗಡೆಯವರಿಗೆ
ನೀಡಿ ಅವರ ಜೊತೆ ಕಸ್ತೂರಿ ರಂಗನ್ ವರದಿ ಜಾರಿ ಆಗದಂತೆ ಸರಕಾರಗಳಿಗೆ ಮನವಿ ನೀಡುವಂತೆ ವಿನಂತಿಸಲಾಯಿತು
ಮನವಿ ಸ್ವೀಕರಿಸಿದ ಪೂಜ್ಯರು ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮದು ಸಂಪೂರ್ಣ ವಿರೋಧ ವಿದೆ ಹೋರಾಟ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಷ್ಟೆ ಯೋಜನೆಯ ಸದಸ್ಯರು ಈ ವರದಿ ಜಾರಿ ವಿರೋದಿಸುವ ಹೋರಾಟಗಳಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು. ಸರಕಾರ ಮಟ್ಟದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರ ದೊರಕುವಂತಾಗಲಿ ಎಂದರು.. ಅಲ್ಲದೆ ಕೇಂದ್ರ ಸರಕಾರಕ್ಕೆ ಈ ಯೋಜನೆ ಜಾರಿ ಆಗದಂತೆ ನನ್ನದಾದ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸುಬ್ರಮಣ್ಯ ವಲಯ ಅಧ್ಯಕ್ಷರು ಆದ ತೀರ್ಥರಾಮ ದೋಣಿಪಳ್ಳ ಸುಳ್ಯ ತಾಲ್ಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಟಿ ನ್. ಬಾಳುಗೋಡು ಒಕ್ಕೂಟ ಅಧ್ಯಕ್ಷರು ನಾಗೇಶ್ ತಳೂರು ಹರಿಹರ ಒಕ್ಕೂಟ ಅಧ್ಯಕ್ಷರು ಹರ್ಷ ಪಾಲ್ತಾಡು. ಕೊಲ್ಲಮೊಗರು ಒಕ್ಕೂಟ ದ ಅಧ್ಯಕ್ಷರಾದ ಹೇಮಂತ್ ದೋಲನಮನೆ ಕಲ್ಮಕಾರ್ ಒಕ್ಕೂಟ ಅಧ್ಯಕ್ಷರು ಆದ ಶೇಷಪ್ಪ ಗೌಡ ಕೊಪ್ಪಡ್ಕ. ಹಾಗೂ ಕೊಲ್ಲಮೊಗರು ಒಕ್ಕೂಟ ಸದಸ್ಯರಾದ ಹರೀಶ್ ಬಳ್ಳಡ್ಕ ಉಪಸ್ಥಿತರಿದ್ದರು…