ಸುಳ್ಯದ 108 ಆಂಬ್ಯುಲೆನ್ಸ್ ವಾಹನ ನಿಲ್ಲಿಸಲು ಸ್ಥಳವಾಕಾಶದ ಕೊರತೆ : ಆರೋಗ್ಯ ಸಚಿವರಿಗೆ ಮನವಿ

Ad Widget . Ad Widget . Ad Widget . . Ad Widget . . Ad Widget .

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ 108 ವಾಹನ ಶೆಡ್ ನಲ್ಲಿ ನಿಲ್ಲಿಸಲು ಆಸ್ಪತ್ರೆಯವರು ತಕರಾರು ಮಾಡುತಿದ್ದಾರೆಂದು 108 ವಾಹನ ಸಿಬ್ಬಂದಿಗಳು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

. Ad Widget . Ad Widget . Ad Widget

ಕಳೆದ 8 ವರ್ಷಗಳಿಂದ ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿ 108 ಅಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಈ 108 ಆಂಬುಲೆನ್ಸ್ ನಿಲುಗಡೆಗೆ ತಾತ್ಕಾಲಿಕ ಶೆಡ್ ಒಂದನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿಯೂ ಆಗಾಗ ಅಂಬುಲೆನ್ಸ್ ಅನ್ನು ಆ ಶೆಡ್ ನಲ್ಲಿ ನಿಲ್ಲಿಸಬಾರದೆಂದು ಆಸ್ಪತ್ರೆಯ ಸಿಬ್ಬಂದಿಗಳು ತಕರಾರು ಮಾಡುತ್ತಿದ್ದು, ಅಲ್ಲದೆ 108 ಅಂಬುಲೆನ್ಸ್ ನಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸರಿಯಾದ ಶೌಚಾಲಯ ಮತ್ತು ರೂಮಿನ ವ್ಯವಸ್ಥೆ ಇರುವುದಿಲ್ಲ. ಆದುದರಿಂದ, ತಾವು ಈ ಬಗ್ಗೆ ಗಮನಹರಿಸಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಕೊಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿದುಬಂದಿದೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ 108 ಸಿಬ್ಬಂದಿ ಹಿಮಕರ ಕಾಡುಪಂಜರು, “108 ವಾಹನ ಆಸ್ಪತ್ರೆಯ ಎದುರಿನ‌ ಶೆಡ್ ನಲ್ಲಿ ನಿಲ್ಲುತಿತ್ತು. ಆದರೆ ಈಗೀಗ ವೈದ್ಯಾಧಿಕಾರಿಗಳು ಶೆಡ್ ನಿಂದ ವಾಹನ ಹೊರಗೆ ಇಡುವಂತೆ ಹೇಳುತಿದ್ದಾರೆ. ಅದಕ್ಕಾಗಿ ಈಗ ರಸ್ತೆಯ ಬದಿಯಲ್ಲಿ 108 ವಾಹನ ನಿಲ್ಲಿಸಿದ್ದೇವೆ. ಈ ಕುರಿತು ಸಚಿವರಿಗೆ ಹಾಗು ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top