ತೆರವಾಗಿದ್ದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿಯ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು ಸಾಧಿಸಿದ್ದಾರೆ.
ಕಿಶೋರ್ ಕುಮಾರ್ ರಿಗೆ 3654 ಮತಗಳು, ಕಾಂಗ್ರೆಸ್ ನ ರಾಜು ಪೂಜಾರಿಯವರಿಗೆ 1957 ಮತಗಳು, ಎಸ್.ಡಿ.ಪಿ.ಐ. ಅಭ್ಯರ್ಥಿ ಅನ್ವರ್ ಸಾದಾತ್ ರವರಿಗೆ 195 ಮತಗಳು,ದಿನಕರ ಉಳ್ಳಾಲ್ (ಪಕ್ಷೇತರ)-9 ಮತ, ಅಸಿಂಧು-87 ಮತ ಎಂದು ತಿಳಿದುಬಂದಿದೆ. ಬಿ.ಜೆ.ಪಿ.ಯ ಕಿಶೋರ್ ಕುಮಾರ್ 1697 ಮತಗಳ ಲೀಡ್ ಪಡೆದು ವಿಜಯಶಾಲಿಯಾಗಿದ್ದಾರೆ.