ತೊಡಿಕಾನ ಸಮೀಪದ ಬಂಗಾರಕೋಡಿ ಎಂಬಲ್ಲಿ ಇಲ್ಲಿಯ ತೋಟವೊಂದಕ್ಕೆ ಕಾಡಾನೆಗಳು ದಾಳಿ ನಡೆಸಿ ಅಪಾರ ಕ್ರಷಿ ಬೆಳೆಗಳನ್ನು ನಾಶ ಪಡಿಸಿದ ಘಟನೆ ವರದಿಯಾಗಿದೆ.
ಇಲ್ಲಿಯ ವಿದ್ಯಾ ಅವರ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 10 ಅಡಿಕೆ,ಎರಡು ಬಾಳೆ ಮರ,ಒಂದು ಜೀಕುಜ್ಜೆ ಮರಗಳನ್ನು ಮುರಿದು ಹಾಕಿವೆ.ಅಲ್ಲದೆ ಒಂದು ತೆಂಗಿನ ಮರಕ್ಕೆ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ.