ಬಂದಡ್ಕದಲ್ಲಿ ಅದ್ದೂರಿಯಾಗಿ ನಡೆದ ಅರೆಭಾಷೆ ಗಡಿನಾಡ ಉತ್ಸವ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗಗಳಲ್ಲಿ ನಡೆಯುವ ಅರೆಭಾಷೆ ಗಡಿನಾಡ ಉತ್ಸವದ ಮೊದಲ ಕಾರ್ಯಕ್ರಮ ಅ.27 ರಂದು ಬಂದಡ್ಕದಲ್ಲಿ ಅದ್ದೂರಿಯಾಗಿ ನಡೆಯಿತು.
ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ದೀಪ ಬೆಳಗಿಸಿ, ಹಿಂಗಾರ ಅರಳಿಸಿ ಉದ್ಘಾಟಿಸಿದರು. ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಕುತ್ತಿಕೋಲು ಗ್ರಾ.ಪಂ.ಅಧ್ಯಕ್ಷ ಮುರಳಿ ಪಯ್ಯಂಗಾನ, ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯ ಕೃಷ್ಣನ್.ಬಿ, ಗ್ರಾ.ಪಂ.ಸದಸ್ಯ ಕುಂಞರಾಮ ತವನಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕುಮಾ‌ರ್, ಬಂದಡ್ಕ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಭಾಶ್ಚಂದ್ರ ರೈ ಮುಖ್ಯ ಅತಿಥಿಗಳಾಗಿದ್ದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ತೇಜಕುಮಾರ್ ಕುಡೆಕಲ್ಲು, ಲೋಕೇಶ್‌ ಊರುಬೈಲು, ಪಿ.ಎಸ್.ಕಾರ್ಯಪ್ಪ, ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ದಾಜೆ, ಸಂದೀಪ್ ಪೂಕಳಕಂಡ, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚ್ಚನ, ಬಂದಡ್ಕ ಗ್ರಾಮ ಗೌಡ ಸಂಘದ ಅಧ್ಯಕ್ಷ ವೆಂಕಟ್ರಮಣ ಕೊಯಿಂಗಾಜೆ, ಸಮಿತಿಯ ಪದಾಧಿಕಾರಿಗಳಾದ ಚರಣ್ ಕುಮಾ‌ರ್ ಪಾಲಾರು ಮಾವಜಿ, ಮೋಹನ್ ಇಳಂದಿಲ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆಗೆ ಮುನ್ನ ಬಂದಡ್ಕದ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರದ ಬಳಿಯಿಂದ ಕಾರ್ಯಕ್ರಮ ನಡೆಯುವ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದ ತನಕ ಅದ್ದೂರಿ ಮೆರವಣಿಗೆ ನಡೆಯಿತು. ಚೆಂಡೆ ವಾದ್ಯ ಮೇಳಗಳು, ಬಣ್ಣದ ಮುತ್ತುಕೊಡೆಗಳು, ಪೂರ್ಣಕುಂಭ ಮೆರವಣಿಗೆಗೆ ಮೆರುಗು ನೀಡಿತು. ಹಿರಿಯರಾದ ಕೃಷ್ಣಪ್ಪ ಗೌಡ ಕೊಯಿಂಗಾಜೆ ಮೆರವಣಿಗೆಗೆ ಚಾಲನೆ ನೀಡಿದರು. ಉತ್ಸವದ ಅಂಗವಾಗಿ ಬೆಳಗ್ಗಿನಿಂದ ಸಂಜೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಿತು. ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ,ವಿಚಾರಗೋಷ್ಠಿ ನಡೆಯಿತು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top