ದೀಪಾವಳಿ ಇನ್ನು ಕೆಲವೇ ದಿನಗಳಲ್ಲಿ ಆಗಮಿಸಲಿದೆ.ಎಲ್ಲೆಲ್ಲೂ ಈಗ ಪಟಾಕಿ ಅಂಗಡಿಗಳು ಸದ್ದು ಮಾಡುತ್ತಿವೆ.ಹೈದರಾಬಾದ್ ಸುಲ್ತಾನ್ ಬಜಾರ್‌ನ ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಪಟಾಕಿ ಬಾಂಬುಗಳಂತೆ ಸಿಡಿದಿದ್ದು, ಅಂಗಡಿಯೊಳಗಿದ್ದ 25ಕ್ಕೂ ಹೆಚ್ಚು ಮಂದಿ ಒಬ್ಬರ ಮೇಲೊಬ್ಬರು ಹತ್ತಿ ಹೊರಗೋಡಿ ಬಂದಿದ್ದಾರೆ. ಪಟಾಕಿ ಅಂಗಡಿಯ ಪಕ್ಕದಲ್ಲೇ ಇದ್ದ ಹೋಟೆಲ್ ಸಹ ಧಗಧಗಿಸಿದ್ದು, ಗ್ರಾಹಕರು ಹೊರಗೋಡಿ ಜೀವ ರಕ್ಷಸಿಕೊಂಡಿದ್ದಾರೆ. 8 ಕಾರುಗಳು, 10ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿವೆ. ಓರ್ವ ಮಹಿಳೆಗೆ ತೀವ್ರ ಗಾಯವಾಗಿದ್ದು, ಅದೃಷ್ಟವಷಾತ್ ಪ್ರಾಣಾಪಾಯ ಸಂಭವಿಸಿಲ್ಲ.