ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಿಂಗನಮಲ ಮಂಡಲ ನಾಯನಪಲ್ಲಿ ಕ್ರಾಸ್ ಬಳಿ ಕಾರಿನ ಟೈರ್ ಸಿಡಿದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಭೀಕರ ಅಪಘಾತ ಸಂಭವಿಸಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂತೋಷ್, ಷಣ್ಮುಖ, ವೆಂಕನ್ನ, ಶ್ರೀಧರ್, ಪ್ರಸನ್ನ ಹಾಗೂ ವೆಂಕಿ ಮೃತ ದುರ್ದೈವಿಗಳು. ಏಕಾಏಕಿ ಕಾರಿನ ಟೈರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಮೃತರು ಅನಂತಪುರದ ಇಸ್ಕಾನ್ ಸಂಸ್ಥೆಗೆ ಸೇರಿದವರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.