ಕೇರಳ ಸಿ.ಎಂ.ಕಾರು ಸಹಿತ ವಾಹನಗಳ ಸರಣಿ ಅಪಘಾತ

ಕೇರಳ: ತಿರುವನಂತಪುರದಲ್ಲಿ ಮಹಿಳೆಯನ್ನು ರಕ್ಷಿಸಲು ಹೋಗಿ ಸಿಎಂ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಹಲವಾರು ವಾಹನಗಳು ಒಂದಕ್ಕೊಂದು ಸರಣಿ ಅಪಘಾತವಾಗಿರುವ ಘಟನೆ ನಡೆದಿದೆ.
ವಾಮನಪುರಂ ಪಾರ್ಕ್‌ ಜಂಕ್ಷನ್‌ನಲ್ಲಿ ತೆರಳುತ್ತಿದ್ದಾಗ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ರೋಡ್ ಕ್ರಾಸ್ ಮಾಡಿದ್ದಾರೆ. ಈ ವೇಳೆ ಸಿಎಂ ಅವರ ಬೆಂಗಾವಲು ಪಡೆಯ ಪೈಲಟ್ ವಾಹನವು ಹಠಾತ್ ಬ್ರೇಕ್ ಹಾಕಿದೆ.
ಈ ವೇಳೆ ಒಂದೇ ವೇಗದಲ್ಲಿದ್ದ ಒಟ್ಟು ಏಳು ವಾಹನಗಳು ಒಂದಕ್ಕೊಂದರಂತೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಸಿಎಂ ಕಾರು ಸೇರಿದಂತೆ ಅವರ ಬೆಂಗಾವಲು ವಾಹನಗಳಿಗೆ ಚಿಕ್ಕಪುಟ್ಟ ಹಾನಿಯಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top