ದೀಪಗಳು ಭರವಸೆಯ ಬೆಳಕಾಗಲಿ

ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಹಿಂದೂ  ಸಂಪ್ರದಾಯದಲ್ಲಿ ಆಚರಿಸುವ ಹಬ್ಬಗಳು ಸಂಸ್ಕೃತಿ,ಸಂಸ್ಕಾರ,ಆಚಾರ ವಿಚಾರ ಮುಂತಾದವುಗಳನ್ನು ಒಳಗೊಂಡು  ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಅಂತಹ ಹಲವಾರು ಹಬ್ಬಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ಹಬ್ಬದ ಹೆಸರನ್ನೇ ಸೂಚಿಸುವಂತೆ ದೀಪದ ಬೆಳಕಲ್ಲಿ ಆಚರಿಸುವ ಹಬ್ಬ ಇದಾಗಿದ್ದು ಮನೆ ಮನೆಗಳಲ್ಲಿ  ದೀಪ ಬೆಳಗಿಸಿ  ಸಂಭ್ರಮಿಸಲಾಗುತ್ತದೆ.

Ad Widget . Ad Widget . Ad Widget . . Ad Widget . . Ad Widget .

ಈ ಹಬ್ಬದಲ್ಲಿ ಸಾಲು ಸಾಲು ದೀಪಗಳು  ಬೆಳಕಿನ ದ್ಯೋತಕವಾಗಿ  ಬೆಳಗುತ್ತವೆ. ಕತ್ತಲೆಯ ಅಂಧಕಾರವನ್ನು ಸರಿಸಿ  ಜಗಜ್ಯೋತಿಯನ್ನು ಬೆಳಗಿಸುವ ಶಕ್ತಿ ಇರುವ ದೀಪಗಳಿಗೆ ಈ ಹಬ್ಬದ ಲ್ಲಿ ವಿಶಿಷ್ಟವಾದ ಸ್ಥಾನವನ್ನು ನೀಡಲಾಗಿದೆ.ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಉದ್ದೇಶಪೂರ್ವಕವಾಗಿ ಆಚರಿಸಲ್ಪಡುವಂತದ್ದು ಮಾತ್ರವಲ್ಲದೆ ಇದರ ಹಿಂದೆ ವೈಜ್ಞಾನಿಕ  ಮತ್ತು ಪೌರಾಣಿಕಗಳು ಅಡಗಿದೆ.ದೀಪಗಳನ್ನು ಏಕೆ ದೀಪಾವಳಿಯಂದು ಬೆಳಗಿಸಬೇಕೆಂಬ ಪ್ರಶ್ನೆಗೆ ಪೌರಾಣಿಕ ಕತೆಯೂ ಹೀಗೆ ಹೇಳುತ್ತದೆ. ರಾಮಾಯಣದಲ್ಲಿ ರಾಮನು 14 ವರುಷ ವನವಾಸವನ್ನು ಕಳೆದ ನಂತರ ಅಯೋಧ್ಯೆಯ ಗಡಿಯನ್ನು ಪ್ರವೇಸಿದಾಗ ದೀಪಗಳನ್ನು ಬೆಳಗಿಸುವ ಮೂಲಕ ಆತನನ್ನು ಸ್ವಾಗತಿಸಲಾಯಿತು. ಆದ್ದರಿಂದ ದೀಪಾವಳಿ ಸಂದರ್ಭದಲ್ಲಿ ಬೆಳಗಿಸಲಾಗುತ್ತದೆ ಎಂಬ ನಂಬಿಕೆ ಇದೆ.ಹೀಗೆ ಪ್ರತಿಯೊಂದು ಆಚರಣೆಯ ಹಿಂದೆ ಹಿರಿಯರ ಬಲವಾದ ನಂಬಿಕೆಯ ಅಡಿಪಾಯವನ್ನು ಕಾಣಬಹುದು .ವೈಜ್ಞಾನಿಕ ಕಾರಣವನ್ನು ನೋಡುವುದಾದರೆ ದೀಪಗಳ ಬೆಳಕಿನಿಂದ  ಸುತ್ತ ಮುತ್ತಲಿರುವ ವೈರಸ್ ಗಳನ್ನು ನಾಶ ಪಡಿಸುವ ಶಕ್ತಿ ದೀಪಗಳಿಗೆ ಇದೆ.

. Ad Widget . Ad Widget . Ad Widget

ದೀಪಗಳು ಹಬ್ಬಗಳ ಪ್ರತೀಕವಾಗಿ ಬೆಳಗಿಸಿ ಸಂಭ್ರಮಪಡುವುದರ ಜೊತೆಗೆ ಇದು ನಮ್ಮ ಬದುಕಿನ ಭಾಗವೂ ಹೌದು. ಬದುಕಲ್ಲಿ  ಕತ್ತಲಿನ ಮಬ್ಬಿನಂತೆ ಆವರಿಸುವ ಕಷ್ಟ ನೋವುಗಳನ್ನು ನಿವಾರಿಸುವ ದೈವಿಕ ಶಕ್ತಿ  ದೀಪಗಳದ್ದು ಮಾತ್ರವಲ್ಲದೆ ಅಜ್ಞಾನದ ಮೇಲೆ ಜ್ಞಾನದ ಬೆಳಕನ್ನು ಹರಿಸಿ ಜ್ಞಾನಜ್ಯೋತಿಯಾಗಿ ಬದುಕು ಬೆಳಕಾಗಲಿ ಎಂಬ ಆಶಯವು ಹೌದು. ಆಂತರಿಕ ಬೆಳಕನ್ನು ಬೆಳಗಿಸುವ ಮಹಾನ್ ಶಕ್ತಿಯಾಗಿ ಬೆಳಗುವ ದೀಪಗಳು ಮಾನವನಲ್ಲಿರುವ ಕೆಟ್ಟಗುಣಗಳನ್ನು ತನ್ನ ಬೆಳಕಿನ ಪ್ರಕಾಶಮಾನದಿಂದ ಸುಟ್ಟು ಹೊಸ ಚೈತನ್ಯದ ಚಿಲುಮೆಯನ್ನು ಸೃಷ್ಟಿಸುತ್ತದೆ.ಆದ್ದರಿಂದ
ದೀಪವೂ ಕೂಡ ಮಾನವನ ಬದುಕಿನಲ್ಲಿ ಉನ್ನತವಾದ ಮಹತ್ವವಹಿಸಿದೆ.

ದೀಪಾವಳಿ ಹಬ್ಬದಲ್ಲಿ ವಿಶೇಷ ಆಕರ್ಷಣೆಯಾಗಿರುವ ದೀಪಗಳು ಬದುಕಿನಲ್ಲಿ ಭರವಸೆಯ ಬೆಳಕಾಗಿ ಬೆಳಗುತ್ತವೆ. ತಾನೇ ಉರಿದರು ತನ್ನಿಂದ ಜಗವ ಬೆಳಗುವ ಪರಿಪಾಠ ದೀಪಗಳದ್ದು. ತನ್ನನ್ನೇ ಸವೆಸಿ ಉರಿಯುವ ಜ್ಯೋತಿಯೂ ನಮ್ಮ ಬದುಕಲ್ಲಿ ಭರವಸೆಯನ್ನು ಮೂಡಿಸುತ್ತದೆ.ಈ ವರುಷದ ದೀಪಾವಳಿ ನಮ್ಮ ನಿಮ್ಮೆಲ್ಲರ ಬದುಕಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಮತ್ತು ಬೆಳಗಿಸಿದ ದೀಪಗಳು ನಿಮ್ಮ ಬದುಕನ್ನು ಉಜ್ವಲಿಸಲಿ ಎಂಬುದು ನಮ್ಮ ಆಶಯ.

ವಿಜಯಲಕ್ಷ್ಮಿ. ಬಿ
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

Leave a Comment

Your email address will not be published. Required fields are marked *

error: Content is protected !!
Scroll to Top