ಗುಂಡ್ಯ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್‌ನಲ್ಲಿ ಕ್ಯಾಂಟರ್ ವಾಹನವೊಂದು ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಕೆಲ ಲಘು ವಾಹನ ಚಾಲಕರು ಘಾಟ್‌ನಲ್ಲಿ ತಿರುವು ಪಡೆದುಕೊಂಡು ಬಿಸಲೆ ಘಾಟ್ ಮೂಲಕ ಸಂಚಾರ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಕೆಲವೊಂದು ಕಡೆ ಮುಂದೆ ಹೋಗುವ ಆತುರದಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಅಲ್ಲೂ ಕೂಡಾ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಯಾಂಟರ್ ಮೇಲತ್ತುವ ಕಾರ್ಯ ನಡೆಯುತ್ತಿರುವ ಪ್ರದೇಶದ ಇಕ್ಕೆಲೆಗಳಲ್ಲೂ ವಾಹನ ದಟ್ಟಣೆ ಇದೆ.