ಮಂಗಳೂರು:ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿಯಾಗಿ ಸುಳ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಸುಳ್ಯದ 110 ಕೆವಿ ನೂತನ ಲೈನ್ ಕಾಮಗಾರಿ ಸುಳ್ಯಕ್ಕೆ ಕಾವು- ಜಾಲ್ಕೂರು ಮಧ್ಯೆ ವಿದ್ಯುತ್ ಲೈನ್ ಕಾಮಗಾರಿ
ನಡೆಯುತ್ತಿದ್ದು ಅದಷ್ಟು ಬೇಗ ಕಾಮಗಾರಿ ಮುಗಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಶಾಸಕರು ಸಲಹೆ ನೀಡಿದರು. ಸುಳ್ಯಕ್ಕೆ ತುರ್ತು ಸಂದರ್ಭದಲ್ಲಿ ವಿದ್ಯುತ್ ಪೂರೈಸಲು ಬೆಳ್ಳಾರೆ- ಪೈಚಾರು ಮೂಲಕ ಹೊಸ ಕೇಬಲ್ ಲೈನ್‌ನ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಮತ್ತು ಕಡಬ ಭಾಗದ ಅಲಂಕಾರಿನಲ್ಲಿ ಹೊಸ 110 ಕೆವಿ ಸ್ಟೇಷನ್‌ನ ಸರ್ವೆ ಕಾರ್ಯವನ್ನು ಬೇಗ ಮುಗಿಸಿ ವರದಿ ಸಲ್ಲಿಸುವಂತೆ ತಿಳಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ, ಸುಳ್ಯ ಮಂಡಲ ಪ್ರಧಾನಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು.