ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ವಿದ್ಯಾರ್ಥಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡು ಒಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ಸಹೋದರಿಯರಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅನನ್ಯಳಿಗೆ ಗಂಭೀರ ಗಾಯವಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.