ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿ ಹರೀಶ್ ಗೋಳಿತೊಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.