ನ.4ರಂದು ಆಲೆಟ್ಟಿ ಸುಳ್ಯ ರಸ್ತೆಯಲ್ಲಿ ಸಂಭವಿಸಿದ
ಕಾರು ಮತ್ತು ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋಪಾಲ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಂಗಳೂರಿನ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು .
ಮೃತರು ಪತ್ನಿ ಜಯಂತಿ ಹಾಗೂ ಇಬ್ಬರು ಪುತ್ರಿಯರಾದ ಕು.ಶರಣ್ಯ ಮತ್ತು ಕು.ಭೂಮಿಕಾ ಮತ್ತು ಸಹೋದರರನ್ನು, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಸುಳ್ಯದಲ್ಲಿ ಕಳೆದ 8 ವರ್ಷಗಳಿಂದ ಅಟೋ ಚಾಲಕರಾಗಿದ್ದರು.ಸುಳ್ಯ ಜೂನಿಯರ್ ಕಾಲೇಜ್ ಬಳಿಯಲ್ಲಿ ವಾಸವಾಗಿದ್ದರು.