ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್ ಬೆಂಬಲದ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ಯವರು ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು/ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಶ್ರೀ ಸದಾನಂದ ಮಾವಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಧನುಶ್ ಕುಕ್ಕೆಟ್ಟಿ ಮತ್ತು ಶೇಖರ್ ಮಣಿಯಾಣಿ ಕಣೆಮರಡ್ಕ, ಮಂಡೆಕೋಲು ಗ್ರಾಮ ಪಂಚಾಯತ್ ಹಾಲಿ ಸದಸ್ಯೆ ಗೀತಾ ಮೈಲೆಟ್ಟಿಪಾರೆ, ಪೂರ್ಣಚಂದ್ರ ಕಣೆಮರಡ್ಕ, ಅಬೂಬಕ್ಕರ್ ಸಿದ್ದೀಕ್ ಮುರೂರು, ಶ್ರೀಮತಿ ಸಂಧ್ಯಾ ಮಂಡೆಕೋಲು, ಇಸುಬು ಮುರೂರು, ಸುಂದರ ನಾಯ್ಕ, ಬಾಬು ಮೈತಡ್ಕ, ಕುಶಾಲಪ್ಪ ಕುಕ್ಕೆಟ್ಟಿ, ಪೋಖರ್ ಕುಂಞಿ ಬಳ್ಳಿಕಜೆ ಮತ್ತಿತರರು ಉಪಸ್ಥಿತರಿದ್ದರು.