ಅರಂತೋಡು, ನ.12 : ಅರಂತೋಡು-ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ದ ಭಾಗವನ್ನು ತಕ್ಷಣ ಅಭಿವೃದ್ಧಿ ಪಡಿಸಿ ತಪ್ಪಿದಲ್ಲಿ ಮುಂದಿನ ಚುನಾವಣೆಯ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಅರಂತೋಡು ಗ್ರಾಮದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಸುಳ್ಯ ವಿಧಾನ ಸಭಾ ಕ್ಷೇತ್ರರ ಶಾಸಕಿ ಭಾಗೀರಥಿ ಮುರಳ್ಯರಿ ಮನವಿ ಸಲ್ಲಿಸಿದೆ.
ಮೈಸೂರು, ಕೊಡಗು ಜಿಲ್ಲಾ ಯಾತ್ರಿಕರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸುವರೇ ಅತೀ ಹತ್ತಿರದ ರಸ್ತೆ ಅರಂತೋಡು-ಎಲಿಮಲೆ ಜಿಲ್ಲಾ ಮುಖ್ಯ ರಸ್ತೆ ಆಗಿದೆ ಎಂಬುದು ತಮಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಯಾತ್ರಿಕರ ವಾಹನಗಳು, ಸ್ಥಳೀಯ ವಾಹನಗಳು,ಸರ್ಕಾರಿ ಬಸ್ಸುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ಮಾಡುತ್ತಿದ್ದಾರೆ. ಅತೀ ಇಕ್ಕಟ್ಟಾದ ಈ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಪರಿಣಾಮವಾಗಿ, ಬೇಸತ್ತ ಈ ಭಾಗದ ಜನತೆ ಕಳೆದ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ. ಇದರ ಮುಂದಾಳತ್ವದಲ್ಲಿ ಊರ ನಾಗರೀಕರು ಚುನಾವಣೆ ಬಹಿಷ್ಕರಿಸಿ ಪಟ್ಟುಬಿಡದ ಹೋರಾಟದ ಫಲವಾಗಿ ಅರಂತೋಡಿನಿಂದ ಪಿಂಡಿಮನೆವರೆಗೆ 3 ಕೀ. ಮೀ. ರಸ್ತೆ ಅಭಿವೃದ್ಧಿ ಹೊಂದಿರುತ್ತದೆ.ಊರ ನಾಗರಿಕರ ಬೇಡಿಕೆ ಕನಿಷ್ಠ ಅಡ್ತಲೆ ವರೆಗೆ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದಾಗಿತ್ತು. ಆ ಪ್ರಕಾರ ಇನ್ನೂ ಒಂದು ಕೀ. ಮೀ. ರಸ್ತೆ ಅಭಿವೃದ್ಧಿ ಹೊಂದಲು ಬಾಕಿ ಇರುತ್ತದೆ. ಆ ಸಂದರ್ಭದಲ್ಲಿ ರಾಜಕೀಯ ನೇತಾರರ, ಜನಪ್ರತಿನಿಧಿಗಳ ಭರವಸೆಯಂತೆ ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಂಡು ಊರಿನ ಸರ್ವ ನಾಗರೀಕರು ಚುನಾವಣೆಗೆ ಸರ್ವ ರೀತಿಯ ಸಹಕಾರ ನೀಡಿರುತ್ತಾರೆ.
ಚುನಾವಣೆಯ ತರುವಾಯ ಈ ರಸ್ತೆಯ ಅಭಿವೃದ್ಧಿ ಹೊಂದಿದ ಭಾಗದ ಉದ್ಘಾಟನೆ ಸಂದರ್ಭದಲ್ಲಿ ತಾವು ಹಾಗೂ ಮಾಜಿ ಸಚಿವರು ಶ್ರೀ ಎಸ್. ಅಂಗಾರರವರು ಉಪಸ್ಥಿತರಿದ್ದ ಸಭೆಯಲ್ಲಿ ಈ ರಸ್ತೆಯ ಉಳಿಕೆ ಒಂದು ಕೀ. ಮೀ. ಭಾಗವನ್ನು ಅತೀ ಶೀಘ್ರದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಹಕ್ಕೋತ್ತಾಯ ಮಾಡುವ ಮನವಿಯನ್ನು, ಅಲ್ಲದೆ ತಮ್ಮನ್ನು ಪುನಃ ನೆನಪಿಸುವ ಸಲುವಾಗಿ ದಿನಾಂಕ ಕಳೆದ ಜನವರಿ 1 ರಂದು ತಮ್ಮ ಕಚೇರಿಗೆ ಬಂದು.ಊರಿನ ಸರ್ವ ನಾಗರಿಕರ ಪರವಾಗಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಮನವಿಯನ್ನುತಮಗೆ ನೀಡಲಾಗಿತ್ತು. ಆದರೆ ಸುಮಾರು ಎರಡು ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಪಡಿಸುವ ಯಾವುದೇ ಸೂಚನೆಗಳೂ ಇದುವರೆಗೂ ಕಂಡುಬಂದಿಲ್ಲ. ಭ್ರಮನಿರಸನಗೊಂಡಿರುವ ಈ ಭಾಗದ ಜನತೆ ಮತ್ತೆ ಹೋರಾಟದ ಹಾದಿ ಹಿಡಿಯುವುದು ಈಗ ಅನಿವಾರ್ಯವಾಗಿದೆ. ಮತ್ತು ಈ ಹೋರಾಟಕ್ಕೆ ನಾಗರಿಕ ಹಿತರಕ್ಷಣಾ ವೇದಿಕೆಯು ಪೂರ್ಣ ಬೆಂಬಲ ನೀಡಲಿದೆ. ದಯವಿಟ್ಟು ಅತೀ ಶೀಘ್ರದಲ್ಲಿ ಅರಂತೋಡು-ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ದ ಭಾಗ ಪಿಂಡಿಮನೆಯಿಂದ ಅಡ್ತಲೆ ವರೆಗಿನ ಒಂದು ಕೀ. ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲುಬ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಮಾಡುತ್ತಿದ್ದೇವೆ. ಒಂದು ವೇಳೆ ರಸ್ತೆ ಅಭಿವೃದ್ಧಿ ಪಡಿಸುವರೇ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ, ಈ ಹಿಂದಿನ ನಿರ್ಣಯದಂತೆ,ಮುಂದುವರೆಯುವುದು ಎಂದು ತೀರ್ಮಾನಿಸಲಾಗಿದೆ. ಇದರಿಂದ ಮುಂಬರುವ ಸಹಕಾರ ಸಂಘಗಳ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ ಎಂದು ತಮ್ಮ ಗಮನಕ್ಕೆ ತರುತಿದ್ದೇವೆ.
ಅಲ್ಲದೆ ಊರ ನಾಗರಿಕರ ಈ ನಿರ್ಧಾರವನ್ನು ನಾಗರಿಕ ಹಿತರಕ್ಷಣಾ ವೇದಿಕೆಯು ಸಂಪೂರ್ಣವಾಗಿ ಬೆಂಬಲಿಸಲಿದೆ ಎಂಬುದನ್ನು ಸಹ ತಮ್ಮ ಗಮನಕ್ಕೆ ತರುತಿದ್ದೇವೆ
ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.
ಯಥಾ ಪ್ರತಿಯನ್ನು
ಚುನಾವಣಾಧಿಕಾರಿಗಳು,/ತಹಶೀಲ್ದಾರರು ಸುಳ್ಯ ತಾಲೂಕು,
ಅಭಿಯಂತಕರು.ಲೋಕೋಪಯೋಗಿ ಇಲಾಖೆ ಸುಳ್ಯ, ಅಧ್ಯಕ್ಷರು, ಬಾ ಜ ಪ ಮಂಡಲ ಸಮಿತಿ ಸುಳ್ಯ ಅಧ್ಯಕ್ಷರು-ಗ್ರಾಮ ಪಂಚಾಯತ್ ಅರಂತೋಡು ಇವರಿಗೆ ಸಲ್ಲಿಸಲಾಗಿದೆ.