ತುಳಸಿ ವಿವಾಹ ಯಾಕೆ ಅಷ್ಟೊಂದು ವಿಶೇಷ? ತುಳಸಿಗೂ ವಿಷ್ಣುವಿಗೂ ಸಂಬಂಧ ಹೇಗೆ?

Ad Widget . Ad Widget . Ad Widget . . Ad Widget . . Ad Widget .

ಕಾರ್ತಿಕ ಮಾಸದ ಹಬ್ಬಗಳಲ್ಲಿ ತುಳಸೀ ವಿವಾಹ ಅಥವಾ ತುಳಸೀ ಪೂಜೆ ವಿಶೇಷ. ಪ್ರತಿ ಭಾರತೀಯರೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಇದು ರಾತ್ರಿ ಆಚರಿಸುವ ಹಬ್ಬ. ಏಕಾದಶೀ ತಿಥಿಯಂದು ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಇದನ್ನು ಉತ್ಥಾನ ದ್ವಾದಶೀ ಎಂದೂ ಕರೆಯುವುದುಂಟು. ಶಯನೈಕಾದಶಿಯಂದು ಮಲಗಿದ ವಿಷ್ಣು ಇಂದು ಏಳುತ್ತಾನೆ.‌ ಹಾಗಾಗಿ ಇದನ್ನು ಪ್ರಬೋಧಿನೀ ಏಕಾದಾಶೀ ಎಂದೂ ಕರೆಯುತ್ತಾರೆ. ಜಲಂಧರ ಎನ್ನುವ ರಾಕ್ಷಸನನ್ನು ವಿವಾಹವಾದವಳು ವೃಂದಾ. ಆಕೆಯೇ ತುಳಸೀ.‌ ಜಲಂಧರನಿಂದ ಲೋಕಕ್ಕೆ ಕಂಟಕವೊದಗಿ ಬಂದಿತು. ಆ ಕಾರಣಕ್ಕೆ ಮಹಾವಿಷ್ಣು ಜಲಂಧರನ‌ ರೂಪ ಧರಿಸಿ ನಿಜವಾದ ಜಲಂಧರನನ್ನು ಸಂಹರಿಸಿದ. ಅನಂತರ ತನ್ನ ರೂಪವನ್ನು ತೋರಿಸುತ್ತಾನೆ. ಕೋಪಗೊಂಡ ವೃಂದಾ ಮಹಾವಿಷ್ಣುವಿಗೆ ಶಾಪವನ್ನು ಕೊಡುತ್ತಾಳೆ. ನಿನಗೂ ಪತ್ನಿ ವಿಯೋಗವಾಗಲಿ ಎಂದು. ಶಾಪದ‌‌ ಫಲವಾಗಿ ರಾಮನ‌ ಅವತರಾದಲ್ಲಿ‌ ವಿಯೋಗವೂ ಆಯಿತು. ವೃಂದೆಯೂ ಮತ್ತೆ ತುಳಸೀ ರೂಪವನ್ನು ತಾಳುತ್ತಾಳೆ. ಮಹಾವಿಷ್ಣುವೂ ಸಾಲಗ್ರಾಮ ರೂಪದಲ್ಲಿ ನೆಲೆಸುತ್ತಾನೆ. ಮಹಾವಿಷ್ಣುವಿಗೆ ವೃಂದಾಳ ಪಾತಿವ್ರತ್ಯ ಇಷ್ಟವಾಗುತ್ತದೆ. ಆದರೆ ಲೋಕಕಂಟಕ ಜಲಂಧರನನ್ನು ಸಂಹರಿಸದೇ ಬೇರೆ ಉಪಾಯವಿರಲಿಲ್ಲ. ಅದಕ್ಕಾಗಿ ತುಳಸಿಯನ್ನು ವಿವಾಹವಾಗುತ್ತಾನೆ. ಮುಂದೆ ಸಾಲಗ್ರಾಮದ ರೂಪದಲ್ಲಿ ಇರುವ ಮಹಾವಿಷ್ಣುವಿಗೆ ತುಳಸಿ ಪ್ರಿಯವಾದುದಾಗುತ್ತದೆ. ಇದರ ಒಂದು ವಿವಾಹವನ್ನು ತುಳಸಿಯ ಜೊತಡ ನೆಲ್ಲಿಕಾಯಿಯನ್ನು ಇಟ್ಟು ಪೂಜಿಸುವ ಕ್ರಮ ಬಂದಿದೆ. ಇಲ್ಲಿಂದ ಮನುಷ್ಯರ ವಿವಾಹಗಳು ನಡೆಯಬೇಕು ನಡೆಯುತ್ತದೆ ಎನ್ನುವುದು ಸಂಪ್ರದಾಯ.

. Ad Widget . Ad Widget . Ad Widget

ಸಂಗ್ರಹ ಬರಹ

Leave a Comment

Your email address will not be published. Required fields are marked *

error: Content is protected !!
Scroll to Top