ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ಧೈವಸ್ಥಾನದಲ್ಲಿ ಮುಂದಿನ ವರ್ಷ 2025 ರ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ವಯನಾಟ್ ದೈವದ ದೈವಂಕಟ್ಟು ಮಹೋತ್ಸವದ ಪೂರ್ವ ಭಾವಿಯಾಗಿ ದೈವಸ್ಥಾನದ ವಠಾರದಲ್ಲಿ ಶ್ರಮದಾನ ನಡೆಯಲಿದ್ದು ನ. 14 ರಂದು ಬೆಳಗ್ಗೆ ಶ್ರಮದಾನದ ಕೆಲಸ ಕಾರ್ಯಗಳಿಗೆ ಮುಹೂರ್ತ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಕಾಲಾವಧಿ ಪುದಿಯೋಡ್ಕಲ್ ಕಾರ್ಯಕ್ರಮವು ನ.28 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರವನ್ನು ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.