ಭಜನೆ ಇದ್ದಲ್ಲಿ ವಿಭಜನೆ ಇಲ್ಲ :ರಾಜಶೇಖರಾನಂದ ಸ್ವಾಮೀಜಿ

ಹಿಂದೂ ಸಮಾಜವನ್ನು ಒಗ್ಗೂಡಿಸಲು ಭಜನೆಯೊಂದೆ ಅಸ್ತ್ರ.ಭಜನೆ ಇದ್ದಲಿ ವಿಭಜನೆ ಇಲ್ಲ ಭಜನೋತ್ಸವದಂತಹ ಕಾರ್ಯಕ್ರಮಗಳು ಧರ್ಮದ ಜಾಗೃತಿ ಮಾಡುತ್ತವೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಸುಳ್ಯ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಭಜನೋತ್ಸವ ಸಮಿತಿ ಸಂಪಾಜೆ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಭಜನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಅವರು
ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಸಾಂಸಾರಿಕವಾಗಿ ನೆಮ್ಮದಿಯಿಂದ ಇರಲು ಮನೆ ಮನೆಗಳಲ್ಲಿ ಭಜನೆಯಾಗಬೇಕು ಎಂದು ಹೇಳಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು। ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಅರಂತೋಡು ತೊಡಿಕಾನ ವ್ಯ. ಸೇ. ಸ.ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಕಿಶೋ‌ರ್ ಕುಮಾರ್ ಯು.ಎಂ,ಮಂಜುನಾಥೇಶ್ವರ ಭಜನಾ ಪರಿಷತ್ ನಿರ್ದೇಶಕ ಸೋಮಶೇಖರ ಪೈಕ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರತ್ನಾವತಿ ಅಳಿಕೆ, ರಾಮಚಂದ್ರ ಕಲ್ಲಗದ್ದೆ, ಯೋಜನಾಧಿಕಾರಿ ಮಾಧವ ಗೌಡ ರವರು ಉಪಸ್ಥಿತರಿದ್ದರು. ಕು. ದೀಪ್ತಿ ಪ್ರಾರ್ಥಿಸಿದರು.
ಸುಳ್ಯ ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಭಜನಾ ಪರಿಷತ್‌ ಅಧ್ಯಕ್ಷ ಯತೀಶ್ ರೈ ದುಗಲಡ್ಕ ವಂದಿಸಿದರು.
ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top