ಸಿಡಿಲು ಬಡಿದು ಬಾಲಕ ಸಾವು

ಪುತ್ತೂರು : ಸಿಡಿಲು ಬಡಿದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.
ಕೆದಿಲ ಪೇರಮುಗೇರು ನಿವಾಸಿ ಶ್ರೀ ರಾಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸುಬೋದ್ ಸಾವನ್ನಪ್ಪಿದ ಬಾಲಕ.ಆತನಿಗೆ 13 ವರ್ಷ ಪ್ರಾಯವಾಗಿತ್ತು.
ಭಾನುವಾರ ಸಂಜೆ ಬಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿತ್ತು ಈ ಸಂದರ್ಭ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ್ದಾನೆ.
ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದ ಆತನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದರು ತಿಳಿಸಿದರು.
ಸುಭೋದ್ ಅವರು ಮನೆಯಂಗಳದಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top