ಸುಳ್ಯ: ಸುಳ್ಯ ಪರಿವಾರಕಾನದ ಉಡುಪಿ ಗಾರ್ಡನ್ ಹೊಟೇಲ್ ಸಮೀಪ ‘ಸೀಫುಡ್ ಸಮುದ್ರ ಫಿಶ್ ಮಾರ್ಕೇಟ್ ಶುಭಾರಂಭಗೊಂಡಿದ್ದು ಭಾರೀ ವ್ಯಾಪಾರ ನಡೆಯುತ್ತಿದೆ. ಸಯ್ಯದ್ ಝನುಲ್ ಅಬಿದಿನ್ ತಂಜಳ್ ಜಯನಗರ ದುವಾ ನೆರವೇರಿಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ಮೊಗರ್ಪಣೆ ಜುಮಾ ಮಸ್ಟಿದ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಫಿಶ್ ಮಾರ್ಕೇಟ್‌ನ ಮಾಲಕರಾದ ಹಮೀದ್, ಶಾಕಿಫ್ ಉಪಸ್ಥಿತರಿದ್ದರು.
ಮೀನು ಮಾರುಕಟ್ಟೆಯಲ್ಲಿ ಅಂಜಲ್,ಭೂತಾಯಿ,ಬಂಗುಡೆ,ಬೆರ್ಕೆ,ಮದ್ಮಲ್,ಮಾಸಿ,ಸೀಡಿ,ಎಟ್ಟಿ ಸೇರಿದಂತೆ ಉತ್ತಮವಾದ ಎಲ್ಲ ಬಗೆಯ ಮೀನುಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದೆ.
ಮೀನು ಪ್ರಿಯರಿಗೆ ಇದೊಂದು ಸಿಹಿ ಸುದ್ದಿಯಾಗಿದೆ.ಸುಮಾರು 25 ವರ್ಷಗಳಿಂದ ಮೀನು ಮಾರಾಟದಲ್ಲಿ ಹೆಸರುವಾಸಿಯಾದ ಮಾಲಕರು ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದು ಸುಳ್ಯದ ಪರಿವಾರಕಾನದಲ್ಲಿ ಹೊಸ ಮಾರ್ಕೆಟ್ ಪ್ರಾರಂಭಿಸಿರುವುದು ಅವರ ಗ್ರಾಹಕ ವರ್ಗದವರು ಸಂತೋಷಗೊಂಡಿದ್ದಾರೆ.
.