ಗಾಂಧಿನಗರ ವೈನ್ ಶಾಪ್ ಒಂದರ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರು ತೋರಿಸಿ ಕೆಲವು ಹೊತ್ತು ಆತಂಕ ಸೃಷ್ಟಿಸಿ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.
ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ಚೀಲದಿಂದ ಉದ್ದದ ತಲವಾರು ಮಾದರಿಯ ಕತ್ತಿಯನ್ನು ಹೊರಗೆ ತೆಗೆದು ಮತ್ತೆ ಚೀಲದಲ್ಲಿ ಇರಿಸುವ ದೃಶ್ಯ ಕಂಡು ಬಂತು.
ಅಲ್ಲಿ ನಿಂತಿರುವ ಓರ್ವರಲ್ಲಿ ಜಗಳ ಮಾಡಿಕೊಂಡು ಅವರಿಗೆ ಥಳಿಸುವ ದೃಶ್ಯ ವಿಡಿಯೋ ವೈರಲ್ ಆಗಿದೆ.
ಜನರು ಜಮಾಯಿಸುತ್ತಿದ್ದಂತೆ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.