ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೇರು ಕ್ರಷಿಗೆ ಪ್ರಸ್ತಾವನೆ ಇರುವ ಹಿನ್ನಲೆಯಲ್ಲಿ ಗೇರು ಸಂಶೋಧನ ಮಂಡಳಿಯ ವಿಜ್ಞಾನಿಗಳು ಸುಳ್ಯ ತಾಲೂಕು ಪಂಚಾಯತ್ ಗೆ ಸಂಪಾಜೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಇಲಾಖೆ (ADPR) ಗೀತಾ , ವಿಷಯ ನಿರ್ವಾಹಕರು ತಾಲೂಕು ಪಂಚಾಯತ್ ರಾಜಲಕ್ಷ್ಮಿ, ಗೇರು ಸಂಶೋಧನಾ ಮಂಡಳಿಯ ವಿಜ್ಞಾನಿಗಳಾದ ಡಾ. ಅಶ್ವತಿ, ಡಾ.ಭಾಗ್ಯ, ಡಾ. ತೊಂಡೈಮಾನ್, NRLM ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ ವಿ.ಜಿ , ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ( ನಿಶಾ ) ಉಪಸ್ಥಿತರಿದ್ದರು.
ಬಳಿಕ ಸಂಪಾಜೆ ಪಂಚಾಯತ್ ಗೆ ಭೇಟಿ ನೀಡಿ ಗೇರು ಸಂಶೋಧನ ಮಂಡಳಿದ ವಿಜ್ಞಾನಿಗಳು ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಗೇರು ಬೀಜ ಕೃಷಿಯಲ್ಲಿ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಬಗ್ಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಗೇರು ಸಂಶೋಧನಾ ಕೇಂದ್ರದ ವಿಜ್ಯಾನಿ ಡಾ ಅಶ್ವತಿ, ಡಾ ಭಾಗ್ಯ, ಡಾ . ತೊಂಡೈಮನ್ ಪಂಚಾಯತ ಅಬಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಕೆ. ಪಿ. ಜಗದೀಶ್ ಮಾಜಿ ಸದಸ್ಯರಾದ ನಾಗೇಶ್, ಕೃಷಿಕರಾದ ವರದರಾಜ್, ಕೃಷಿ ಸಖಿ ಮೋಹಿನಿ ಉಪಸ್ಥಿತರಿದ್ದರು.ಸಂಪಾಜೆಯ ಗೇರು ಕ್ರಷಿಕ ಶಂಕರ್ ಪ್ರಸಾದ್ ರೈ ಅವರ ಗೇರು ತೋಟಕ್ಕೆ ಭೇಟಿ ನೀಡಲಾಯಿತು.