ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಮಾನ್ಯ ಡಿ.ವಿ. ಸದಾನಂದ ಗೌಡರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸದಸ್ಯರು ಹಾಗೂ ಮಂಡೆಕೋಲು ಗ್ರಾಮ ಗೌಡ ಸಮಿತಿಯ ಪದಾಧಿಕಾರಿಗಳು ಅವರ ದೇವರಗುಂಡದ ನಿವಾಸದಲ್ಲಿ ಭೇಟಿಯಾಗಿ ಗೌರವಿಸಿದರು.
ಡಿ.ವಿ.ಯವರ ಹುಟ್ಟೂರಾದ ಮಂಡೆಕೋಲಿನಲ್ಲಿ ಡಿಸೆಂಬರ್ 1 ರಂದು ನಡೆಯಲಿರುವ ಅರೆಭಾಷೆ ಗಡಿನಾಡ ಉತ್ಸವ -2024 ಕಾರ್ಯಕ್ರಮಕ್ಕೆ ಅವರನ್ನು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ವಿನೋದ್ ಮೂಡಗದ್ದೆ, ಮಂಡೆಕೋಲು ಗ್ರಾಮ ಗೌಡ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿ ಮನೆ, ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ವಿನುತಾ ಪಾತಿಕಲ್ಲು, ಗ್ರಾಮ ಗೌಡ ಮಹಿಳಾ ಸಮಿತಿ ಕಾರ್ಯದರ್ಶಿ ಭಾರತಿ ಯು.ಎಂ, ಸುಳ್ಯ ಗೌಡರ ಯುವ ಸೇವಾ ಸಂಘದ ನಿರ್ದೇಶಕರಾದ ಹರಿಶ್ಚಂದ್ರ ಪಾತಿಕಲ್ಲು, ಡಿ.ವಿ. ಸುರೇಶ್, ನಾಗೇಶ್ ದೇವರಗುಂಡ, ಡಾಟಿ ಸದಾನಂದ ಮೊದಲಾದವರು ಉಪಸ್ಥಿತರಿದ್ದರು.