ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲಕರಾದ ವಿಶ್ವನಾಥ್ ಅವರ ಮನೆಯಲ್ಲಿ ವಿಶೇಷ ಒಂದು ಚಿಟ್ಟೆ ಕಾಣಿಸಿಕೊಂಡಿದೆ.
ಮೊದಲಿಗೆ ಮಕ್ಕಳಿಗೆ ಈ ವಿಶೇಷ ಚಿಟ್ಟೆ ಕಂಡಿದೆ. ಆಟ ಆಡುತ್ತಾ ಹೊರಗಡೆ ಹೋಗುವಾಗ ಗೋಡೆಯಲ್ಲಿ ಮಗಳು ಪಂಚಮಿಗೆ ಈ ಚಿಟ್ಟೆ ಮೊದಲು ಕಂಡಿದೆ. ಪ್ರಣವಿ ಅದರ ಫೋಟೋ ತೆಗೆದು ಮನೆಯವರಿಗೆ ತೋರಿಸಿ ಇದು ಚಿಟ್ಟೆ ಹೌದೋ ಅಥವಾ ಬೇರೆ ಏನಾದರೂ ಹುಳದ ಜಾತಿಯೇ ಎಂದು ಅವಳು ಕೇಳಿದ್ದಾಳೆ.ಬಳಿಕ ಮನೆಯವರು ಚಿಟ್ಟೆ ಎಂದು ಹೇಳಿದ್ದಾಗ ಆಶ್ಚರ್ಯ ಹಾಗೂ ಖುಷಿ ವ್ಯಕ್ತಪಡಿಸಿದ್ದಾಳೆ.