ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ವತಿಯಿಂದ ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಮಲಾರುಣ ಪಡ್ಡಂಬೈಲು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.
ಕವಿಗೋಷ್ಠಿಯಲ್ಲಿ ಕವಿಗಳಾದ ಲೀಲಾಕುಮಾರಿ ತೊಡಿಕಾನ, ಭೀಮರಾವ್ ವಾಷ್ಠರ್, ಹೇಮಲತಾ ಕಜೆಗದ್ದೆ, ಶಿವದೇವಿ ಅವನೀಶ್ಚಂದ್ರ, ತೀರ್ಥರಾಮ ಹೊದ್ದೆಟ್ಟಿ, ವಿಜಯಕುಮಾರ್ ಕಾಣಿಚ್ಚಾರ್,ಅನುರಾಧ ಉಬರಡ್ಕ ಅವರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ರಮೇಶ್ ನೀರಬಿದಿರೆ ಅವರು ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕಿ ಶಶ್ಮಿ ಭಟ್ ಸ್ವಾಗತಿಸಿದರು.ಶಿಕ್ಷಕ ಗೋಪಾಲಕೃಷ್ಣ ಬನ ವಂದಿಸಿದರು.