ಸಂಪಾಜೆ ದರ್ಖಾಸ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಹಾಗೂ ಪೋಷಕರಿಗೆ ಆಟೋಟ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೋಷಕರಾದ ಶ್ರೀಮತಿ ಹೇಮಾವತಿ ಲಕ್ಷ್ಮೀನಾರಾಯಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಶ್ರೀಯುತ ಚಿದಾನಂದ ಮಾಸ್ತರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಶ್ರೀ ಅಬೂಸಾಲಿ ಪಿ ಕೆ, ಶ್ರೀ ಶೌವಾದ್ ಗೂನಡ್ಕ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಹರ್ಷಿತಾ, ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ( ನಿಶಾ ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜೇತರಾದ ಮಕ್ಕಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಪ್ರಾರ್ಥನೆಯನ್ನು ಪುಟಾಣಿ ಮಕ್ಕಳು ನೆರವೇರಿಸಿದರು. ಆಶಾಕಾರ್ಯಕರ್ತೆ ಶ್ರೀಮತಿ ಆಶಾ ವಿನಯ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಾರದಾ ಮಧುಸೂದನ್ ಮಾಡಿದರು. ಬಹುಮಾನ ಪ್ರಾಯೋಜಕರಾಗಿ ನಿವೃತ್ತ ಸೈನಿಕರಾದ ಶ್ರೀ ಲಕ್ಷ್ಮೀನಾರಾಯಣ ಪೇರಡ್ಕ ಇವರು ಸಹಕರಿಸಿದರು. ಶ್ರೀ ಮಧುಸೂಧನ್ ಹಾಗೂ ಅಂಗನವಾಡಿ ಸಹಾಯಕಿ ಶ್ರೀಮತಿ ರೋಹಿಣಿಯವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರೀ ಚಿದಾನಂದ ಮಾಸ್ತರ್ ಸಿಹಿ ತಿಂಡಿ ನೀಡಿ ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪುಟಾಣಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.