ಸುಳ್ಯ ತಾಲೂಕು ಕಛೇರಿ, ಉಪನೋಂದಣಾಧಿಕಾರಿಗಳ ಕಛೇರಿ ಮತ್ತು ಭೂ ಮಾಪನಾ ಇಲಾಖೆಯ ಕಚೇರಿಗಳು ಸುಳ್ಯ ಮಿನಿ ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎರಡು ಮಹಡಿಗಳನ್ನು ಹೊಂದಿರುತ್ತದೆ. ಇದರಲ್ಲಿ ಲಿಫ್ಟ್ ಸೌಲಭ್ಯವಿಲ್ಲದ್ದರಿಂದ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ತುಂಬಾ ತೊಂದರೆಯಾಗಿರುತ್ತದೆ. ಆದುದರಿಂದ ಸದ್ದಿ ‘ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ ಸಿ ರವರಿಗೆ ಮನವಿ ನೀಡಿದ್ದಾರೆ.